Home » ಜನೆವರಿ 1 ವರೆಗೆ ಶೀತ ವಾತಾವರಣ ಮುಂದುವರಿಕೆ.

ಜನೆವರಿ 1 ವರೆಗೆ ಶೀತ ವಾತಾವರಣ ಮುಂದುವರಿಕೆ.

ಶೀತ ವಾತಾವರಣ : ಸಾರ್ವಜನಿಕ ಗಮನಕ್ಕೆ, ಕರ್ನಾಟಕದ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮತ್ತು ತೆಲಂಗಾಣ, ಉತ್ತರಾಖಂಡದ ಪ್ರತ್ಯೇಕ ಪ್ರದೇಶಗಳಲ್ಲಿ ತೀವ್ರ ಶೀತ ವಾತಾವರಣ ಮುಂದುವರಿದಿದೆ. ಪೂರ್ವ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಮತ್ತು ಪಶ್ಚಿಮ ಉತ್ತರ ಪ್ರದೇಶದ ಪ್ರತ್ಯೇಕ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಶೀತ ವಾತಾವರಣ ತೀವ್ರಗೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಡಿಸೆಂಬರ್‌ 27ರವರೆಗೆ ಉತ್ತರಾಖಂಡ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಜಾರ್ಖಂಡ್, ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ರಾತ್ರಿ ಹಾಗೂ ಬೆಳಿಗ್ಗೆ ದಟ್ಟವಾದ ಮಂಜು ಕವಿಯುವ ಸಾಧ್ಯತೆ ಇದೆ. ಅಲ್ಲದೆ ದಿನದಿಂದ ದಿನಕ್ಕೆ ತೀವ್ರ ಶೀತ ವಾತಾವರಣ ಇರುವ ಸಾಧ್ಯತೆ ಇದೆ.

ಹವಾಮಾನದ ದಿಢೀರ್ ಬದಲಾವಣೆಗೆ ಕಾರಣಗಳೇನು?

ಶೀಲಂಕಾದ ಉತ್ತರ ಭಾಗದಲ್ಲಿ ಕಾಣಿಸಿಕೊಂಡಿದ್ದ ‘ದಿತ್ವಾ’ ಚಂಡಮಾರುತವು ತಮಿಳುನಾಡಿನ ಕರಾವಳಿಯ ತಲುಪಿದ ಪರಿಣಾಮ, ಬೆಂಗಳೂರಿನಲ್ಲಿ ಚಳಿ ಹೆಚ್ಚಳವಾಗಿದೆ. ಇದರ ಜೊತೆಗೆ ಈ ವರ್ಷ ಮುಂಗಾರು ಮುಗಿದ ನಂತರವೂ ಅಂದರೆ ಇತ್ತೀಚಿನ ದಿನದವರೆಗೂ ಬೆಂಗಳೂರು ಸುತ್ತಮುತ್ತ ಮಳೆಯಾಗಿರುವುದು ಇನ್ನೊಂದು ಕಾರಣ. ದ್ವಿತಾ ಚಂಡಮಾರುತ ಕರ್ನಾಟಕದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೆ, ಚಂಡಮಾರುದಿಂದಾಗಿ ಗಾಳಿ ಹೆಚ್ಚಾಗಿರುವುದರಿಂದ ವಾತಾವಣದ ತೇವಾಂಶ ಕಡಿಮೆಯಾಗಿ ಕೊರೆಯುವ ಚಳಿಯ ಅನುಭವ ಆಗುತ್ತಿದೆ.

ಅದೇ ರೀತಿ ಈಗ ನೀವು ನೋಡುತ್ತಿರುವ ಹಾಗೆ ಈ ವಾರದಲ್ಲಿ ತಾಪಮಾನ ಕಡಿಮೆಯಾಗಿ ಶೀತ ಹವಾಮಾನದ ಗಾಳಿ ಹೆಚ್ಚಾಗುತ್ತಿದೆ. ಚಳಿ ಋತುವಿನೊಂದಿಗೆ ಬರುವ ಸಂಭಾವ್ಯ ಆರೋಗ್ಯ ಅಪಾಯಗಳ ಬಗ್ಗೆ ಜಾಗರೂಕರಾಗಿರುವುದು ಬಹಳ ಮುಖ್ಯ. ಈ ಕಳವಳಗಳಲ್ಲಿ, ಪಾರ್ಶ್ವವಾಯು ಸಂಭವಿಸುವುದು ಗಮನ ಅಗತ್ಯವಿರುವ ನಿರ್ಣಾಯಕ ಸಮಸ್ಯೆಯಾಗಿ ಉಳಿದಿದೆ. ಶೀತ ಹವಾಮಾನವು ನಿರ್ದಿಷ್ಟ ಸವಾಲುಗಳನ್ನು ಒಡ್ಡಬಹುದು ಮತ್ತು ಪಾರ್ಶ್ವವಾಯು ಅಪಾಯಕಾರಿ ಅಂಶಗಳು ಸೇರಿದಂತೆ ಕೆಲವು ಆರೋಗ್ಯ ಪರಿಸ್ಥಿತಿಗಳನ್ನು ಉಲ್ಬಣಗೊಳಿಸಬಹುದು.

ಪಾರ್ಶ್ವವಾಯು ಎಂದರೆ ಮೆದುಳಿಗೆ ರಕ್ತದ ಹರಿವು ಅಡ್ಡಿಪಡಿಸಿದಾಗ ಅಥವಾ ಕಡಿಮೆಯಾದಾಗ ಸಂಭವಿಸುವ ವೈದ್ಯಕೀಯ ತುರ್ತುಸ್ಥಿತಿಯಾಗಿದ್ದು, ಮೆದುಳಿನ ಅಂಗಾಂಶವು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪಡೆಯುವುದನ್ನು ನಿಲ್ಲಿಸುತ್ತದೆ. ಈ ಅಡಚಣೆಯು ಅಡಚಣೆ (ಇಸ್ಕೆಮಿಕ್ ಸ್ಟ್ರೋಕ್) ಅಥವಾ ರಕ್ತನಾಳದ ಒಡೆತ (ಹೆಮರಾಜಿಕ್ ಸ್ಟ್ರೋಕ್) ದಿಂದಾಗಿರಬಹುದು. ಪಾರ್ಶ್ವವಾಯು ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಮೆದುಳಿನ ಜೀವಕೋಶಗಳು ಸಾಯಲು ಪ್ರಾರಂಭಿಸುತ್ತವೆ, ಇದು ತಕ್ಷಣದ ವೈದ್ಯಕೀಯ ಆರೈಕೆಯ ತುರ್ತು ಅಗತ್ಯವನ್ನು ಒತ್ತಿಹೇಳುತ್ತದೆ.

ಈ ವರ್ಷ ತಾಪಮಾನ ಭಾರಿ ಇಳಿಕೆ, ಎಷ್ಟು ತಾಪಮಾನ ಇಳಿಕೆ ಆಗಿದೆ?

ಕಳೆದ ಹತ್ತು ದಿನಗಳಿಂದ ಅಥಣಿ ತಾಲೂಕು ಸೇರಿದಂತೆ ಗಡಿಭಾಗದಲ್ಲಿ ತಂಡಿ ಹಾಗೂ ಚಳಿಗಾಳಿ ಜೋರಾಗಿದ್ದು, ಜನರು ಕಂಗಾಲಾಗಿದ್ದಾರೆ. ಈ ಭಾಗದಲ್ಲಿ 13 ಡಿಗ್ರಿಗೆ ತಾಪಮಾನ ಕುಸಿದಿರುವುದು, ತಣ್ಣನೆ ವಾತಾವರಣಕ್ಕೆ ಕಂಗೆಟ್ಟಿದ್ದಾರೆ. ಅಲ್ಲದೇ, ಕಳೆದ ಒಂದು ವಾರದಿಂದ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗುತ್ತಿದ್ದು, ಜನರು ಮನೆಗಳಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿ ಅಷ್ಟೇ ಅಲ್ಲ ಸುಮಾರು ಜಿಲ್ಲೆಗಳಲ್ಲಿ 10 -13 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ತಲುಪಿದೆ. ಹೀಗಾದರೆ ಜನರಿಗೆ ಚಳಿಯ ಕಷ್ಟ ಬಹಳ ಎದುರಾಗುತ್ತದೆ.

Leave a Reply

Your email address will not be published. Required fields are marked *