Home » ಇನ್ನೂ ಮುಂದೆ ರೇಷನ್ ಪಡೆಯಲು ಈ 12 ಮಾನದಂಡಗಳು ಕಡ್ಡಾಯ.

ಇನ್ನೂ ಮುಂದೆ ರೇಷನ್ ಪಡೆಯಲು ಈ 12 ಮಾನದಂಡಗಳು ಕಡ್ಡಾಯ.

12 ಮಾನದಂಡಗಳು : ಪ್ರಿಯ ಓದುಗರೇ ನಿನ್ನೆ ನಡೆದ ಸದನದಲ್ಲಿ ಬಿಪಿಎಲ್ ಕಾರ್ಡ್ ಸಮಸ್ಯೆ ಬಗ್ಗೆ ಚರ್ಚೆ ಮಾಡುವಾಗ ಯಾವೆಲ್ಲಾ ಮಾನದಂಡಗಳನ್ನು ಪಾಲಿಸಬೇಕು? ಯಾವೆಲ್ಲಾ ನಿಯಮಗಳನ್ನು ಜಾರಿಗೆ ತರಲಾಗಿದೆ? ಸರ್ಕಾರ ಹಾಗೂ ಸಾರ್ವಜನಿಕರು ಯಾವ ರೀತಿ ಇದನ್ನು ಜಾರಿಗೆ ತರಬೇಕು ಎಂದು ಸಂಪೂರ್ಣ ಚರ್ಚೆ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.

ಹೌದು ನಿನ್ನೆ ನಡೆದ ಸದನದಲ್ಲಿ ಬಿಪಿಎಲ್ ಕಾರ್ಡ್ ಬಗ್ಗೆ ಚರ್ಚೆ ಆಯಿತು. ಏನೆಂದರೆ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಷ್ಟು ಬಿ.ಪಿ.ಎಲ್ ಪಡಿತರ ಚೀಟಿಗಳು ಎ.ಪಿ.ಎಲ್ ಪಡಿತರ ಚೀಟಿಗಳಾಗಿ ಪರಿವರ್ತನೆಯಾಗಿವೆ ಎಂದು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಾಲಕೃಷ್ಣ ಅವರು ಕೇಳಿದ ಚುಕ್ಕಿ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯದಲ್ಲಿ ಈ ಕೆಳಕಂಡ ವಿಧಗಳಲ್ಲಿ 7,76,206 ಪಡಿತರ ಫಲಾನುಭವಿಗಳನ್ನು ಗುರುತಿಸಲಾಗಿರುತ್ತದೆ.

ಯಾವೆಲ್ಲಾ ಮಾನದಂಡಗಳನ್ನು ಪಾಲಿಸಬೇಕು?

  • CBDT ಆದಾಯ ಗುಂಪು – ವಾರ್ಷಿಕ ಆದಾಯ ₹1,20,000 ಕ್ಕಿಂತ ಹೆಚ್ಚು
  • GSTN ಒಟ್ಟು ವಹಿವಾಟು (Gross Turnover) – ₹25 ಲಕ್ಷಕ್ಕಿಂತ ಹೆಚ್ಚು
  • MCA – ವ್ಯಕ್ತಿ ನಿರ್ದೇಶಕರಾಗಿ (Director) ನೋಂದಾಯಿತನಾಗಿರುವುದು
  • PDS ನಕಲಿ ರೇಷನ್ ಕಾರ್ಡ್ (RC) – ಅಂತರ್ ರಾಜ್ಯ (Inter State)
  • PDS ನಕಲಿ ರೇಷನ್ ಕಾರ್ಡ್ (RC) – ಅಂತರ್ ರಾಜ್ಯದ ಒಳಗೆ (Intra State)
  • PDS ರೇಷನ್ ಕಾರ್ಡ್ ಸದಸ್ಯ – 100 ವರ್ಷಕ್ಕಿಂತ ಮೇಲ್ಪಟ್ಟವರು
  • PDS ಮೌನ ರೇಷನ್ ಕಾರ್ಡ್ (Silent RC) – 12 ತಿಂಗಳಿಗಿಂತ ಹೆಚ್ಚು
  • PDS ಮೌನ ರೇಷನ್ ಕಾರ್ಡ್ (Silent RC) – 6–12 ತಿಂಗಳು
  • PDS ಏಕ ಸದಸ್ಯ ರೇಷನ್ ಕಾರ್ಡ್ – 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು
  • PM-KISAN ಭೂಮಿ ಹಿಡಿತ – 7.5 ಎಕರೆಗಿಂತ ಹೆಚ್ಚು
  • UIDAI ಆಧಾರ್ ಸ್ಥಿತಿ – ಮೃತರು (Deceased)
  • ವಾಹನ ಮಾಲಿಕತ್ವ ಮೌಲ್ಯ – ಲಘು ಮೋಟಾರ್ ವಾಹನ (Light Motor Vehicle) ಹೊಂದಿರುವವರು
  • ವಾಹನ ಮಾಲಿಕತ್ವ ಮೌಲ್ಯ – ವಾಹನ ಹೊಂದಿರುವವರು
  • ವಾಹನ ಮಾಲಿಕತ್ವ ಮೌಲ್ಯ – ಮೇಲ್ಕಂಡವುಗಳ ಹೊರತುಪಡಿಸಿ ಇತರೆ ವಾಹನ ಹೊಂದಿರುವವರು

ಸುವರ್ಣ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆಯಲು ಒಟ್ಟು 3.96 ಲಕ್ಷ ಅರ್ಜಿಗಳು ಬಂದಿದ್ದವು. ಈ ಪೈಕಿ 2.95 ಲಕ್ಷ ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. ಉಳಿದ ಅರ್ಜಿಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅನರ್ಹ ಬಿಪಿಎಲ್ ಕಾರ್ಡ್ ಫಲಾನುಭವಿಗಳನ್ನು ಪತ್ತೆ ಹಚ್ಚಿ, ಎಪಿಎಲ್‌ಗೆ ಬದಲಾವಣೆ ಮಾಡಿ ಅರ್ಹ ಫಲಾನುಭವಿಗಳಿಗೆ ಕಾರ್ಡ್‌ಗಳನ್ನು ವಿತರಿಸುವ ಕಾರ್ಯ ಮುಂದುವರಿದಿದೆ ಎಂದು ಹೇಳಿದರು.

ಇಲ್ಲಿವರೆಗೆ ಎಷ್ಟು ಜನ ಅಕ್ಕಿ ಪಡೆಯುತ್ತಿದ್ದಾರೆ?

  1. ಕಳೆದ 6 ತಿಂಗಳಿನಿಂದ ಅಕ್ಕಿ ಪಡೆಯದವರು – 2,75,667
  2. ಆದಾಯ ತೆರಿಗೆದಾರರು – 98,473
  3. ವಾರ್ಷಿಕ ವರಮಾನ 1.20 ಲಕ್ಷಕ್ಕಿಂತ ಹೆಚ್ಚು ಇರುವವರು – 10,09,475
  4.  ಸರ್ಕಾರಿ ನೌಕರರು – 4,036
  5. ಒಟ್ಟು – 13,87,651

ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿಗಳನ್ನು ಪಡೆಯುವ ಬಗ್ಗೆ ಸರ್ಕಾರವು 2017 ರಲ್ಲಿ ಈ ಕೆಳಕಂಡಂತೆ ಹೊರಗಿಡುವ ಮಾನದಂಡಗಳನ್ನು ರೂಪಿಸಿದೆ.

  • ವೇತನವನ್ನು ಗಣನೆಗೆ ಎಲ್ಲಾ ಖಾಯಂ ನೌಕರರು ಅಂದರೆ ತೆಗೆದುಕೊಳ್ಳದೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು/ ನಿಗಮಗಳು/ ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ/ಸೇವಾ ತೆರಿಗೆ/ ಜಿಎಸ್‌ಟಿ/ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು,
  • ಗ್ರಾಮೀಣ ಪ್ರದೇಶಗಳಲ್ಲಿ 03 ಹೆಕ್ಟರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು.
  • ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು.
  • ಕುಟುಂಬದ ವಾರ್ಷಿಕ ಆದಾಯವು ರೂ.1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು
  • ಸದರಿ ಮಾನದಂಡಗಳ ಆಧಾರದ ಮೇಲೆ ಅನರ್ಹವೆಂದು ಕಂಡುಬಂದ ಆದ್ಯತಾ ಪಡಿತರ ಚೀಟಿಗಳನ್ನು ((PHH) ಆದ್ಯತೇತರ ಪಡಿತರ ಚೀಟಿಗಳನ್ನಾಗಿ (NPHH) ಪರಿವರ್ತಿಸಲು ಕ್ರಮವಹಿಸಲಾಗುತ್ತಿದೆ.

ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯುವ ಬಗ್ಗೆ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಅದರಂತೆ, ರಾಜ್ಯದಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ, ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಈ ತಿಂಗಳ ಅಂತ್ಯದೊಳಗೆ ಪ್ರತಿ ಜಿಲ್ಲೆಗಳಲ್ಲಿ ಸಭೆ ನಡೆಸಿ, ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು. ಹೊಸ ಒಳ ಮೀಸಲಾತಿ ಅನ್ವಯ, 3,517 ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ನ್ಯಾಯಬೆಲೆ ಅಂಗಡಿಗಳು ದೊರೆಯಲಿವೆ. ರಾಜ್ಯದ ಯಾವುದೇ ಭಾಗದಲ್ಲಿ ದವಸ-ಧಾನ್ಯಗಳ ಕೊರತೆ ಉಂಟಾಗದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.

ಜಿಪಿಎಸ್ (GPS) ಮೂಲಕ ನಿಮ್ಮ ಬೆಳೆ ಸಮೀಕ್ಷೆ ಆರಂಭ.

ನಿಮ್ಮ ಗ್ರಾಮದ ಅಭಿವೃದ್ದಿಗೆ ಬಂದ ಹಣವೆಷ್ಟು? ಈಗ ನಿಮ್ಮ ಮೊಬೈಲ್‌ನಲ್ಲೇ ಚೆಕ್‌ ಮಾಡಿ!

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಗಮನಕ್ಕೆ:
ಗ್ರಾಮ ಪಂಚಾಯಿತಿಯ ಚುನಾವಣೆಗಾಗಿ ನೀವು ಮಾಡುವ ಪ್ರಚಾರ ಹಾಗೂ ಪ್ರತಿನಿತ್ಯದ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವುದರಿಂದ ಜನಾಕರ್ಷಣೆ ಆಗುತ್ತದೆ. ಹಾಗೂ ನಿಮ್ಮ ಕಾರ್ಯ ವೈಖರಿ ಜನರಿಗೆ ತಿಳಿದು ಜನ ನಿಮ್ಮನ್ನು ಬೆಂಬಲಿಸಲು ಮುಂದಾಗುತ್ತಾರೆ. ಆದ್ದರಿಂದ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದ ಪೋಸ್ಟರ್ಗಳು ಹಾಗೂ ವಿಡಿಯೋಗಳನ್ನು ನಾವು ಅತ್ಯುತ್ತಮ ಕಡಿಮೆ ದರದಲ್ಲಿ ಮಾಡಿಕೊಡುತ್ತೇವೆ ನಿಮಗೆ ಹಬ್ಬಗಳಿಗೆ ವಿಶೇಷ ಸಂದರ್ಭಗಳಲ್ಲಿ ಅಥವಾ ಹುಟ್ಟುಹಬ್ಬಗಳಲ್ಲಿ ಶುಭಕೋರುವ ಪೋಸ್ಟರ್ಗಳು ಬೇಕಿದ್ದರೆ ಈ ಕೆಳಗೆ ನೀಡಿರುವ ನಂಬರನ್ನು ಸಂಪರ್ಕಿಸಿ. 9845499218

Leave a Reply

Your email address will not be published. Required fields are marked *