ನಾಳೆ ಭಾರತ್ ಬಂದ್! ಏನಿರುತ್ತೆ? ಏನಿರಲ್ಲಾ?
ಪ್ರೀಯ ಸಾರ್ವಜನಿಕರೇ ನಿಮಗೊಂದು ಆಶ್ಚರ್ಯಕರ ಸುದ್ದಿ, ಫೆಬ್ರವರಿ 12, 2026 ರಂದು ದೇಶಾದ್ಯಂತ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಹಲವು ರೈತ ಸಂಘಟನೆಗಳು ಸೇರಿ ಈ ಮುಷ್ಕರವನ್ನು ಘೋಷಿಸಿವೆ. ಹೊಸ ಕಾರ್ಮಿಕ ಸಂಹಿತೆಗಳು ಹಾಗೂ ಪ್ರಸ್ತಾವಿತ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಈ ಬಂದ್ ನಡೆಯುತ್ತಿದೆ. ಮುಷ್ಕರಕ್ಕೆ ಕಾರಣವೇನು? ಸಂಯುಕ್ತ ಕಿಸಾನ್ ಮೋರ್ಚಾದ(SKM) ಸಂಪೂರ್ಣ ಬೆಂಬಲದೊಂದಿಗೆ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಎನ್‌ಟಿಯುಸಿ), ಆಲ್ ಇಂಡಿಯಾ ಟ್ರೇಡ್…
