ಮನೆಯಲ್ಲೇ ಪೋಟ್ಯಾಷ್ (Pottash) ತಯಾರಿಸುವ ವಿಧಾನ.
ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾದಂತೆ ಅವರು ಆರೋಗ್ಯಯುತ ಆಹಾರದ ಹುಡುಕಾಟದಲ್ಲಿ ತೊಡಗಿದ್ದಾರೆ. ರಾಸಾಯನಿಕ ಮಿಶ್ರಿತ ವಿಷಕಾರಿ ಆಹಾರವನ್ನು ಸೇವಿಸಿ, ಆಸ್ಪತ್ರೆಗಳಿಗೆ ಹಣ ಸುರಿದು ಸಾಕಾಗಿರುವ ಮಂದಿ, ಈಗ ರಾಸಾಯನಿಕಗಳ ಸಹವಾಸವೇ ಇರದ ಸಾವಯವ ಉತ್ಪನ್ನಗಳ ಬಗ್ಗೆ ಆಸಕ್ತಿ ತಳೆದಿದ್ದಾರೆ. ಸಾವಯವ ಪೋಟ್ಯಾಷ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು, ಇದು ಸಸ್ಯಗಳ ಬೆಳವಣಿಗೆಗೆ (ಹೂವು-ಹಣ್ಣು) ಪೋಷಕಾಂಶಗಳನ್ನು ಒದಗಿಸುತ್ತದೆ. ಮುಖ್ಯವಾಗಿ ಬಾಳೆಹಣ್ಣಿನ ಸಿಪ್ಪೆಗಳನ್ನು ಒಣಗಿಸಿ ಪುಡಿ ಮಾಡುವುದು ಅಥವಾ ಮರದ ಬೂದಿಯನ್ನು ನೀರಿನಲ್ಲಿ ನೆನೆಸಿ ದ್ರವ ಗೊಬ್ಬರ ತಯಾರಿಸುವುದು…
