ರೈತರೇ ನಿಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡದಿದ್ದರೆ ಏನಾಗುತ್ತದೆ ಎಂದು ನೋಡೋಣ ಬನ್ನಿ. ಕೃಷಿ ಜಮೀನುಗಳ ಮಣ್ಣಿನ ಪರೀಕ್ಷೆಯನ್ನು ಕಾಲ ಕಾಲಕ್ಕೆ ನಿರ್ವಹಿಸದೆ ಇರುವುದರಿಂದ ರೈತರು ಸಾಕಷ್ಟು ಹಿನ್ನಡೆ ಅನುಭವಿಸಲು ಕಾರಣ ಎಂದು ಚೆಟ್ಟಳ್ಳಿ ಕಾಫಿ ಮಂಡಳಿ ಸಂಪನ್ಮೂಲ ವ್ಯಕ್ತಿ ಡಾ.ಸೈಯದ್ ನದಾಬ್ ತಿಳಿಸಿದರು.
ಕೃಷಿಕರು ಕಾಲ ಕಾಲಕ್ಕೆ ಮಣ್ಣು ಪರೀಕ್ಷೆಗೆ ಒಳಪಡಿಸಿಕೊಳ್ಳುವುದರಿಂದ ಮಣ್ಣಿನ ಮಹತ್ವವನ್ನು ಹೆಚ್ಚಿಸಿಕೊಳ್ಳಬಹುದಲ್ಲದೆ, ಹುಳಿ ಮಣ್ಣು ನಿರ್ವಹಣೆ ರಾಸಯನಿಕ ಗೊಬ್ಬರ ಹಾಕುವ ಪ್ರಮಾಣದ ಬಗ್ಗೆ ಮಾಹಿತಿ ನೀಡಿದರು.
ಪರೀಕ್ಷೆ ಹೇಗೆ ಮಾಡಬೇಕು?
ಮಣ್ಣು ಪರೀಕ್ಷೆಯು ಜಮೀನಿನ ಫಲವತ್ತತೆ, ಪೋಷಕಾಂಶಗಳ ಲಭ್ಯತೆ ಮತ್ತು ಮಣ್ಣಿನ ಆರೋಗ್ಯವನ್ನು ತಿಳಿಯಲು, ಹಾನಿಯಾಗದಂತೆ V ಆಕೃತಿಯಲ್ಲಿ 15-20 ಸೆಂ.ಮೀ. ಆಳದಲ್ಲಿ 15-20 ಕಡೆ ಮಾದರಿಗಳನ್ನು ಸಂಗ್ರಹಿಸಿ, ಮಿಶ್ರಣ ಮಾಡಿ 500 ಗ್ರಾಂ ತೂಕದ ಮಣ್ಣನ್ನು ನೆರಳಿನಲ್ಲಿ ಒಣಗಿಸಿ, ನಂತರ ಮಣ್ಣು ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸುವುದಾಗಿದೆ.
ಮಣ್ಣು ಪರೀಕ್ಷೆ ಮಾಡುವ ಹಂತಗಳು –
- ಮಾದರಿ ಸಂಗ್ರಹಣೆ: ಹೊಲದ ವಿವಿಧ ಕಡೆಗಳಿಂದ 15-20 ಉಪ-ಮಾದರಿಗಳನ್ನು (V ಆಕೃತಿಯ ರಂಧ್ರದಿಂದ) ಸಂಗ್ರಹಿಸಿ, ಅವೆಲ್ಲವನ್ನೂ ಒಂದು ಬಕೆಟ್ನಲ್ಲಿ ಚೆನ್ನಾಗಿ ಮಿಶ್ರಣ ಮಾಡಬೇಕು.
- ಕ್ವಾರ್ಟರಿಂಗ್ ವಿಧಾನ (Quartering): ಮಿಶ್ರಣ ಮಾಡಿದ ಮಣ್ಣನ್ನು ನಾಲ್ಕು ಭಾಗ ಮಾಡಿ, ಎದುರುಬದಿರಾಗಿರುವ ಎರಡು ಭಾಗದ ಮಣ್ಣನ್ನು ತೆಗೆದುಹಾಕಿ, ಉಳಿದ ಅರ್ಧ ಭಾಗವನ್ನು ಮತ್ತೆ 4 ಭಾಗ ಮಾಡಿ ಈ ಪ್ರಕ್ರಿಯೆಯನ್ನು 500-600 ಗ್ರಾಂ ತೂಕ ಬರುವವರೆಗೆ ಪುನರಾವರ್ತಿಸಬೇಕು.
- ಒಣಗಿಸುವುದು: ಸಂಗ್ರಹಿಸಿದ ಮಣ್ಣನ್ನು ನೆರಳಿನಲ್ಲಿ ಮಾತ್ರ ಒಣಗಿಸಬೇಕು (ಬಿಸಿಲಿನಲ್ಲಿ ಒಣಗಿಸಬಾರದು).
- ಪ್ಯಾಕಿಂಗ್: ಒಣಗಿದ ಮಣ್ಣನ್ನು ಸ್ವಚ್ಛವಾದ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಹಾಕಿ, ಅದರ ಮೇಲೆ ರೈತನ ಹೆಸರು, ವಿಳಾಸ, ಸರ್ವೆ ನಂಬರ್, ಬೆಳೆದ ಬೆಳೆ, ಹಿಂದಿನ ಬೆಳೆ, ಪೋಷಕಾಂಶಗಳ ವಿವರಗಳನ್ನು ನಮೂದಿಸಿ ಲೇಬಲ್ ಮಾಡಬೇಕು.
- ಪ್ರಯೋಗಾಲಯ: ಈ ಮಾದರಿಯನ್ನು ಹತ್ತಿರದ ಮಣ್ಣು ಪರೀಕ್ಷಾ ಕೇಂದ್ರಕ್ಕೆ (ಲ್ಯಾಬ್) ಕಳುಹಿಸಿ ವರದಿ ಪಡೆಯಬೇಕು.
ರೈತರೇ ನೀವು ನೋಡುತ್ತಿರುವ ಹಾಗೆ ಯಾವ ಭೂಮಿಯು ಮೊದಲಿನಷ್ಟು ಲಾಭದಾಯಕವಾಗಿಲ್ಲ. ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳು ಬಳಸುವುದರಿಂದ ಯಾವುದೇ ಭೂಮಿ ಫಲವತ್ತತೆ ಹೆಚ್ಚಿಸಲು ಸಾಧ್ಯವಿಲ್ಲ. ರೈತರು ಎಚ್ಚರಿಕೆಯಿಂದ ಕೃಷಿ ಮಾಡಬೇಕು. ಪ್ರತಿಯೊಂದು ಭೂಮಿಯನ್ನು ಪ್ರತಿ 3 ವರ್ಷಗಳಿಗೊಮ್ಮೆ ಮಣ್ಣು ಪರೀಕ್ಷೆ ಮಾಡಿಸಬೇಕು. ಇಲ್ಲದಿದ್ದರೆ ರೈತರ ಭೂಮಿ ಫಲವತ್ತತೆಯಿಂದ ಬರಡಾಗುತ್ತದೆ.
