ಪ್ರಧಾನ ಮಂತ್ರಿ ಫಸಲ್ ಭೀಮಾ : ಪ್ರೀಯ ರೈತರೇ ಇವತ್ತು ನಾವು ಒಂದು ಕೇಂದ್ರ ಸರ್ಕಾರದ ರೈತ ಪರ ಯೋಜನೆ ಬಗ್ಗೆ ಮಾಹಿತಿ ನೀಡುತ್ತೇನೆ. PMFBY ಪ್ರಧಾನ ಮಂತ್ರಿ ಫಸಲ್ ಬಿಮಾ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ 2025-26ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗಾಗಿ ರೈತರು ಅಧಿಸೂಚಿತ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ. ಕೊನೆಯ ದಿನಾಂಕ 26-12 2025 ಆಗಿದೆ. ಆಸಕ್ತ ರೈತರು ನಿಗದಿತ ದಿನಾಂಕದೊಳಗೆ ಬೆಳೆವಿಮೆ ಪಾವತಿಸಿ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ 2016 ರಲ್ಲಿ ಪ್ರಾರಂಭವಾಯಿತು. ಇದು ವಿವಿಧ ದುರದೃಷ್ಟಕರ ಘಟನೆಗಳಿಂದ ರೈತರು ಅನುಭವಿಸುವ ಆರ್ಥಿಕ ನಷ್ಟಗಳ ವಿರುದ್ಧ ವಿಮಾ ರಕ್ಷಣೆಯನ್ನು ಒದಗಿಸುವ ಯೋಜನೆಯಾಗಿದೆ. ಸ್ಥಳೀಯ ಅಪಾಯಗಳು, ಕೊಯ್ಲಿನ ನಂತರದ ನಷ್ಟಗಳು, ನೈಸರ್ಗಿಕ ವಿಕೋಪಗಳು, ಅಕಾಲಿಕ ಮಳೆ, ಕೀಟಗಳು, ಬೆಳೆ ರೋಗಗಳು ಇತ್ಯಾದಿಗಳಿಂದ ಉಂಟಾಗುವ ಬೆಳೆ ವೈಫಲ್ಯವನ್ನು ಇದು ಒಳಗೊಳ್ಳುತ್ತದೆ. ಈ ಯೋಜನೆಯು ‘ಒಂದು ರಾಷ್ಟ್ರ, ಒಂದು ಬೆಳೆ, ಒಂದು ಪ್ರೀಮಿಯಂ’ ಎಂಬ ಧ್ಯೇಯವಾಕ್ಯದಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಭಾರತದ ರೈತರಿಗೆ ಕೈಗೆಟುಕುವ ಬೆಳೆ ವಿಮೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಗುರಿಯು ದೇಶದಲ್ಲಿ ಒಟ್ಟು ಬಿತ್ತನೆ ಪ್ರದೇಶವನ್ನು ಒಳಗೊಳ್ಳುವ ಪ್ರಾಥಮಿಕ ಗಮನದೊಂದಿಗೆ ಭಾರತದಲ್ಲಿ ವಿಮೆಯಲ್ಲಿ ಬೆಳೆಗಳ ನುಗ್ಗುವಿಕೆಯನ್ನು ವಿಸ್ತರಿಸುವುದಾಗಿದೆ.
ಏನಿದು ಪಿಎಂ ಫಸಲ್ ಬಿಮಾ ಯೋಜನೆ?
ಇದು ರೈತರಿಗೆಂದು ಇರುವ ಬೆಳೆ ವಿಮಾ ಸ್ಕೀಮ್. 2016ರಲ್ಲಿ ಆರಂಭವಾದ ಈ ಯೋಜನೆಯಲ್ಲಿ ರೈತರು ತಮ್ಮ ಬೆಳೆಗಳಿಗೆ ಇನ್ಷೂರೆನ್ಸ್ ಮಾಡಿಸಬಹುದು. ನಿಗದಿತ ಇನ್ಷೂರೆನ್ಸ್ ಕಂಪನಿಗಳಿಂದ ವಿಮೆ ಪಡೆಯಬಹುದು. ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಂದ ಸಬ್ಸಿಡಿ ಸಿಗುತ್ತದೆ. ಪ್ರೀಮಿಯಮ್ ಬಹಳ ಕಡಿಮೆ ಇರುತ್ತದೆ.
ಬೆಳೆ ಹಾನಿಯಾದಾಗ ಯಾವಾಗ ಯಾರಿಗೆ ಕರೆ ಮಾಡುವುದು ಕಡ್ಡಾಯವಾಗಿದೆ?
ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪ ನಷ್ಟ ಪರಿಹಾರ ಹೆಚ್ಚಿನ ಮಳೆ, ಬೆಳೆ ಮುಳುಗಡೆ ಇತ್ಯಾದಿ ಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದರೆ ಬೆಳೆ ವಿಮೆ ಮಾಡಿಸಿರುವ ರೈತರು ವಿಪತ್ತು ಸಂಭವಿಸಿದ 72 ಗಂಟೆಗಳ ಒಳಗೆ ವಿಮಾ ಸಂಸ್ಥೆಯ ಟೋಲ್ ಫ್ರೀ ಸಂಖ್ಯೆಗೆ ಸೂಚನೆ ನೀಡಬೇಕೆಂದು ಈ ಮೂಲಕ ಕೋರಲಾಗಿದೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಉದ್ದೇಶ-
- PMFBY ಕೃಷಿ ವಲಯದಲ್ಲಿ ಸುಸ್ಥಿರ ಉತ್ಪಾದನೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.
- ಬೆಳೆ ವೈಫಲ್ಯದಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಕಡಿಮೆ ಮಾಡುವ ಮೂಲಕ, ಇದು ರೈತರ ಆದಾಯವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.
- ರೈತರು ಸ್ಥಿರವಾದ ಆದಾಯವನ್ನು ಹೊಂದಿರುವಾಗ, ಅವರು ಉತ್ತಮ ಕೃಷಿ ಪದ್ಧತಿಗಳಲ್ಲಿ ಹೂಡಿಕೆ ಮಾಡಬಹುದು, ಇದು ಹಲವಾರು ಪ್ರಯೋಜನಗಳನ್ನು ತರುತ್ತದೆ.
UNIVERSAL SOMPO GENERAL INSURANCE COMPANY LTD.
Toll Free Number 1800 200 5142 ಅಥವಾ ಆಯಾ ತಾಲ್ಲೂಕಿನ ವಿಮೆ ಸಂಸ್ಥೆ ಪ್ರತಿನಿಧಿಗೆ ಸಂಪರ್ಕಿಸಬಹುದು.
- ಬೈಲಹೊಂಗಲ/ಕಿತ್ತೂರು 8310266373
- ರಾಮದುರ್ಗ 8296224360
- ಸವದತ್ತಿ/ಯರಗಟ್ಟಿ 8073436800
- ಬೆಳಗಾವಿ 7483676940
- ಅಥಣಿ/ ಕಾಗವಾಡ 7349397137
- ಹುಕ್ಕೇರಿ 9590311620
- ಗೋಕಾಕ/ಮೂಡಲಗಿ 8123475430
- ರಾಯಬಾಗ 8722334452
- ಚಿಕ್ಕೋಡಿ/ನಿಪ್ಪಾಣಿ 8722334452
- ಖಾನಾಪುರ 8861641675
ಪಸಲ್ ಭೀಮಾ ಯೋಜನೆ -(Document required for insurance)
- ಅರ್ಜಿ ಪಾರ್ಮ್
- ಆಧಾರ ಕಾರ್ಡ್ ಜರಾಕ್ಸ್
- ಪ್ಯಾನ್ ಕಾರ್ಡ್ ಜರಾಕ್ಸ
- ಕಂಪ್ಯೂಟರ್ ಉತಾರ್
- ಬೆಳೆ ಪ್ರಮಾಣ ಪತ್ರ
- ಜಂಟಿ ಇದ್ದರೆ 100 ಭಾಂಡ ಪೇಪರ್ (ಕಬೂಲಿ ಪತ್ರ)
- ನೋಟರಿ ಮಾಡಿಸಿ ಕೊಡಬೇಕು.
ಎಲ್ಲಿ ಎಷ್ಟು ನೋಂದಾಯಿಸಿದ್ದಾರೆ?
ಪ್ರಸ್ತುತ ಜಿಲ್ಲೆಯಲ್ಲಿ ಇದುವರೆಗೆ 836 ರೈತರು ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ದೇವನಹಳ್ಳಿ ತಾಲೂಕಿನಲ್ಲಿ 209, ದೊಡ್ಡಬಳ್ಳಾಪುರ ತಾಲೂಕಿನಲ್ಲಿ365, ಹೊಸಕೋಟೆ ತಾಲೂಕಿನಲ್ಲಿ191, ನೆಲಮಂಗಲ ತಾಲೂಕಿನಲ್ಲಿ 71 ರೈತರು ಮಾತ್ರ ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಅತಿವೃಷ್ಟಿ ಅನಾವೃಷ್ಟಿ ಆದಲ್ಲಿ ಬೆಳೆ ವಿಮೆ ರೈತರ ಕೈ ಹಿಡಿಯಲಿದೆ. ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಆಗಸ್ಟ್ 16 ಕೊನೆಯ ದಿನವಾಗಿದೆ.
ಎಷ್ಟು ಪರಿಹಾರ ಸಿಕ್ಕಿದೆ?
ಕಳೆದ ಸಾಲಿನಲ್ಲಿ ಈ ಯೋಜನೆಗೆ ಜಿಲ್ಲೆಯಲ್ಲಿ ಒಟ್ಟು 5710 ರೈತರು ನೋಂದಣಿ ಮಾಡಿಸಿಕೊಂಡಿದ್ದು, ಅದರಲ್ಲಿ 1770 ರೈತರಿಗೆ 79 ಲಕ್ಷ ರೂ. ಪರಿಹಾರ ವಿಮೆ ದೊರೆತಿದೆ.
ಯಾವ ಬೆಳೆಗೆ ಎಷ್ಟು ವಿಮೆ?
ರಾಗಿ (ಮಳೆಯಾಶ್ರಿತ) ಬೆಳೆಗೆ ರೈತರು ಪ್ರೀಮಿಯಂ ಮೊತ್ತ ಎಕರೆಗೆ 340 ಪಾವತಿಸಿದರೆ ವಿಮಾ ಮೊತ್ತ 17 ಸಾವಿರ, ನೀರಾವರಿಯಲ್ಲಿರಾಗಿ ಬೆಳೆಯನ್ನು ಬೆಳೆಯುವ ರೈತರು ಪ್ರೀಮಿಯಂ ಮೊತ್ತ ಎಕರೆಗೆ 406 ಪಾವತಿಸಿದರೆ ವಿಮಾ ಮೊತ್ತ 20300 ಪಡೆಯಬಹುದು. ಇನ್ನೂ ನೀರಾವರಿ ಪ್ರದೇಶದಲ್ಲಿ ಭತ್ತ ಬೆಳೆಯುವ ರೈತರು ಪ್ರೀಮಿಯಂ ಮೊತ್ತ ಎಕರೆಗೆ 746 ಪಾವತಿಸಿದರೆ ವಿಮಾ ಮೊತ್ತ 37300 ಪಡೆಯಬಹುದು. ಮುಸುಕಿನ ಜೋಳ ಬೆಳೆಗೆ ಪ್ರೀಮಿಯಂ ಮೊತ್ತ ಎಕರೆಗೆ 452 ಪಾವತಿಸಿದರೆ ವಿಮಾ ಮೊತ್ತ 22600 ಸಿಗಲಿದೆ.
