ಕೇಂದ್ರ ಸರ್ಕಾರವು ಪರಿಚಯಿಸುವ ಪ್ರಮುಖ ಯೋಜನೆಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸಹ ಪ್ರಮುಖವಾಗಿದೆ. ಇದು ದೇಶದ ಲಕ್ಷಾಂತರ ಜನ ರೈತರಿಗೆ ಆರ್ಥಿಕವಾಗಿ ನೆರವಾಗಿದೆ. ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ಇಂದಿಗೂ ಕೋಟ್ಯಾಂತರ ಜನ ಕೃಷಿಯನ್ನೇ ಅವಲಂಬಿಸಿದ್ದಾರೆ.
2019 ರಲ್ಲಿ ಪ್ರಾರಂಭವಾದ PM-KISAN ಯೋಜನೆಯಿಂದ ಈಗಾಗಲೇ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ಬಹಳಷ್ಟು ಅನುಕೂಲವಾಗಿದೆ. ವಾರ್ಷಿಕವಾಗಿ ₹6,000 ಧನಸಹಾಯ ಸರ್ಕಾರದಿಂದ ಪಡೆಯಬಹುದು. ಇದನ್ನು ತಲಾ ₹2,000 ದಂತೆ ಮೂರು ಕಂತುಗಳಲ್ಲಿ ಪ್ರತೀ ಬಾರಿ ನೀಡಲಾಗುತ್ತದೆ. ಈ ಯೋಜನೆಯು ಕೃಷಿಗೆ ಹೆಚ್ಚು ಪ್ರೋತ್ಸಾಹ, ಬೆಳೆ-ಸಂಬಂಧಿತ ವೆಚ್ಚಗಳಿಗೆ ಆರ್ಥಿಕ ಬಲ ನೀಡುವ ಉದ್ದೇಶದಿಂದ ಆರಂಭ ಮಾಡಲಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಎಷ್ಟು ಹಣ ರೈತರಿಗೆ ಸಿಗುತ್ತದೆ ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ರೈತರಿಗೆ ವಾರ್ಷಿಕವಾಗಿ ಒಟ್ಟು 6,000 ರೂ. ಸಹಾಯವನ್ನು ನೀಡುತ್ತದೆ. ಸಂಪೂರ್ಣ ಮೊತ್ತವನ್ನು ಏಕಕಾಲದಲ್ಲಿ ವಿತರಿಸುವ ಬದಲು ಈ ಹಣವನ್ನು ವರ್ಷವಿಡೀ ತಲಾ 2,000 ರೂಪಾಯಿಯಂತೆ ಮೂರು ಪ್ರತ್ಯೇಕ ಕಂತುಗಳಲ್ಲಿ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಈ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವುದರಿಂದ ಇದರಲ್ಲಿ ಯಾವುದೇ ಮಧ್ಯಮ ವರ್ಗದವರು ಭಾಗಿಯಾಗುವುದಿಲ್ಲ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣದಿಂದ ರೈತರು ತಮ್ಮ ಕೃಷಿ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು, ದೊಡ್ಡ ಮತ್ತು ಸಣ್ಣ ವರ್ಗದ ರೈತರಿಗೆ ಇದರಿಂದ ಅನುಕೂಲವಾಗುತ್ತಿದೆ. ಇನ್ನು ಈ ಬಾರಿಯ 22 ನೇ ಕಂತಿನ ಹಣವು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 2,000 ರೂ. ಮೊತ್ತ ಜಮೆ ಆಗಲಿದೆ.
ಫಲಾನುಭವಿ ಸ್ಥಿತಿ ಲಿಂಕ್:
https://pmkisan.gov.in/BeneficiaryStatus New.aspx
ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಸಹ ನೀವು ಸಂಪೂರ್ಣ ಡೀಟೇಲ್ಸ್ ಪಡೆಯಬಹುದು. ಶ್ರೀ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರೊಂದಿಗೆ ಮಾತನಾಡುವುದನ್ನು ನೋಡಲು ಇಲ್ಲಿ ಕಿಳಗಡೆ ನೀಡಿರುವ ಆ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನೀವು ನೇರವಾಗಿ ಅವರು ಮಾತನಾಡುವುದನ್ನು ನೋಡಬಹುದು.
ಹಣ ಪಡೆಯಲು ನಿಯಮಗಳು –
- ಇ-ಕೆವೈಸಿ ಪೂರ್ಣಗೊಳಿಸಿ.
- ಬ್ಯಾಂಕ್ ಖಾತೆ ಜೊತೆ ಆಧಾರ್ ಸಂಯೋಜನೆ ಖಾತ್ರಿಪಡಿಸಿಕೊಳ್ಳಿ.
- ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಿಕೊಳ್ಳಿ.
- ಬಾಕಿ ಇರುವ ಭೂ ದಾಖಲೆಗಳ ವಿವಾದ ಪರಿಹರಿಸಿಕೊಳ್ಳಿ.
- pmkisan.gov.in ನಲ್ಲಿ ಫಲಾನುಭವಿ ಸ್ಥಿತಿಗತಿ ಪರಿಶೀಲಿಸಿ.
- ಒಟಿಪಿ ಹಾಗೂ ಅಧಿಸೂಚನೆಗಳಿಗಾಗಿ ಮೊಬೈಲ್ ನಂಬರ್ ಅನ್ನು ಅಪ್ ಡೇಟ್ ಮಾಡಿ.
