Home » ಇಂದು ಪಿಎಂ ಕಿಸಾನ್  20ನೇ ಕಂತಿನ ಹಣ ಬಿಡುಗಡೆ.

ಇಂದು ಪಿಎಂ ಕಿಸಾನ್  20ನೇ ಕಂತಿನ ಹಣ ಬಿಡುಗಡೆ.

ಪ್ರೀಯ ರೈತರೇ ನಿಮಗೊಂದು ಸಂತಸದ ಸುದ್ದಿ. ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರಿಗೆ ನೇರವಾಗಿ ಪಿಎಂ ಕಿಸಾನ್ ಹಣವನ್ನು ಬಿಡುಗಡೆ ಮಾಡಿದ್ದಾರೆ. ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವ ಗುರಿಯೊಂದಿಗೆ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು ಜಾರಿಗೆ ತಂದಿದ್ದು, ಇದೀಗ 20ನೇ ಕಂತಿನ ಹಣ ಜಮಾ ಪ್ರಕ್ರಿಯೆ ಆರಂಭವಾಗುತ್ತಿದೆ. ಈ ವಾರದಲ್ಲಿ ಫಲಾನುಭವಿ ರೈತರ ಖಾತೆಗೆ ₹2,000 ಹಣ ನೇರವಾಗಿ ಜಮಾಗೊಳ್ಳಲಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿ ರೈತರ ಖಾತೆಗೆ ಆಗಸ್ಟ್ 2 ರಂದು ಹಣ ಜಮಾ ಮಾಡಲಾಗುತ್ತದೆ. ನಿಖರವಾದ ದಿನಾಂಕದ ಅಧಿಕೃತ ದೃಢೀಕರಣವಿಲ್ಲದಿದ್ದರೂ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 20 ನೇ ಕಂತು ಆಗಸ್ಟ್ 2025 ರ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಪಿಎಂ ಕಿಸಾನ್ ಯೋಜನೆಯಲ್ಲಿ ಒಂದು ವರ್ಷದಲ್ಲಿ 6,000 ರೂ ಹಣವನ್ನು ರೈತರಿಗೆ ನೀಡಲಾಗುತ್ತಿದೆ. ಅಂದರೆ, ತಲಾ 2,000 ರೂಗಳಂತೆ ಮೂರು ಕಂತುಗಳಲ್ಲಿ ಈ ಹಣವನ್ನು ನೀಡಲಾಗುತ್ತಿದೆ. ಈಗ ಒಂದು ಕಂತು ಹೆಚ್ಚು ಮಾಡಬಹುದು. 2,000 ರೂಗಳ ನಾಲ್ಕು ಕಂತುಗಳನ್ನು ರೈತರ ಖಾತೆಗಳಿಗೆ ಹಾಕಬಹುದು. ಒಟ್ಟು ಒಂದು ವರ್ಷದಲ್ಲಿ 8,000 ರೂ ಹಣವು ರೈತರಿಗೆ ಸಿಗಲಿದೆ.

19 ನೇ ಕಂತು ಫೆಬ್ರವರಿ 2025 ರಲ್ಲಿ ಬಿಡುಗಡೆಯಾಯಿತು. ಪಿಎಂ ಕಿಸಾನ್ ಕಂತುಗಳನ್ನು ಸಾಮಾನ್ಯವಾಗಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಬಿಡುಗಡೆ ಮಾಡಲಾಗುತ್ತದೆ. 20 ನೇ ಕಂತು ಆರಂಭದಲ್ಲಿ ಜೂನ್/ಜುಲೈನಲ್ಲಿ ನಿರೀಕ್ಷಿಸಲಾಗಿತ್ತು ಆದರೆ ವಿಳಂಬವಾಗಿದೆ. ಈ ವಿಳಂಬಕ್ಕೆ ಸರ್ಕಾರ ಅಧಿಕೃತ ಕಾರಣವನ್ನು ಒದಗಿಸಿಲ್ಲ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ 20ನೇ ಕಂತು ಆ. 2ರಂದು ಬಿಡುಗಡೆಯಾಗಲಿದೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಲು ಮತ್ತು ಗರಿಷ್ಠ ಸಂಖ್ಯೆಯಲ್ಲಿ ಯೋಜನೆ ರೈತರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರ ಅಧ್ಯಕ್ಷತೆಯಲ್ಲಿ ಬುಧವಾರ ಹೇಳಿದರು.

e-KYC ಪಿಎಂ ಕಿಸಾನ್ ಯೋಜನೆಯ ಎಲ್ಲಾ ನೋಂದಾಯಿತ ರೈತರಿಗೆ ಕಡ್ಡಾಯವಾಗಿದೆ.

ಆನ್‌ಲೈನ್: OTP ಪರಿಶೀಲನೆಯನ್ನು ಬಳಸಿಕೊಂಡು PM ಕಿಸಾನ್ ಪೋರ್ಟಲ್‌ನಲ್ಲಿ ಪೂರ್ಣಗೊಳಿಸಬಹುದು.

ಆಫ್‌ಲೈನ್: ಬಯೋಮೆಟ್ರಿಕ್ ದೃಢೀಕರಣದೊಂದಿಗೆ ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಲ್ಲಿ(CSC) ಮಾಡಬಹುದು.

ಮೊಬೈಲ್ ಅಪ್ಲಿಕೇಶನ್: PM-KISAN ಅಪ್ಲಿಕೇಶನ್ ಮೂಲಕವೂ ಮುಖದ ದೃಢೀಕರಣ ಲಭ್ಯವಿದೆ.

ಭೂ ದಾಖಲೆಗಳ ಪರಿಶೀಲನೆ: ನಿಮ್ಮ ಭೂ ದಾಖಲೆಗಳನ್ನು ನವೀಕರಿಸಬೇಕು ಮತ್ತು ಪರಿಶೀಲಿಸಬೇಕು. ಅಪೂರ್ಣ ಅಥವಾ ಹೊಂದಿಕೆಯಾಗದ ದಾಖಲೆಗಳು ಪಾವತಿ ಸಮಸ್ಯೆಗಳಿಗೆ ಕಾರಣವಾಗಬಹುದು.

ಆಧಾರ್-ಬ್ಯಾಂಕ್ ಖಾತೆ ಲಿಂಕ್: ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಸರಿಯಾಗಿ ಲಿಂಕ್ ಮಾಡಬೇಕು (ಸೀಡ್ ಮಾಡಬೇಕು).

DBT ಸಕ್ರಿಯಗೊಳಿಸಿದ ಬ್ಯಾಂಕ್ ಖಾತೆ: ಸರ್ಕಾರವು DBT ಮೂಲಕ ಮಾತ್ರ ಹಣವನ್ನು ವರ್ಗಾಯಿಸುವುದರಿಂದ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೇರ ಲಾಭ ವರ್ಗಾವಣೆ (DBT) ಸಕ್ರಿಯಗೊಂಡಿದೆ ಎಂದು ಖಚಿತಪಡಿಸಿಕೊಳ್ಳಿ.

ನಿಮ್ಮ PM ಕಿಸಾನ್ ದಾಖಲೆಗಳು, ಆಧಾರ್ ಮತ್ತು ಬ್ಯಾಂಕ್ ಖಾತೆಯಲ್ಲಿ ನಿಮ್ಮ ಹೆಸರು ಅಥವಾ ಇತರ ವಿವರಗಳಲ್ಲಿ ಯಾವುದೇ ವ್ಯತ್ಯಾಸಗಳಿವೆಯೇ ಎಂದು ಪರಿಶೀಲಿಸಿ.

ರೈತರ ಭವಿಷ್ಯದ ಸುರಕ್ಷತೆ, ಭಾರತದ ಕೃಷಿಯ ಸಮೃದ್ಧಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನ ಪಡೆಯಲು ರೈತರು ಈ ಕೆಳಗೆ ನೀಡಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಹೊಸ ಅಪ್ಡೇಟ್ ಬಂದಿದೆ. ರೈತರು ಈ ಕೆಲಸ ಮಾಡದಿದ್ದರೆ ಹಣ ಬರಲ್ಲ.
ಕೇಂದ್ರ ಸರ್ಕಾರವು ಪಿ. ಎಂ. ಕಿಸಾನ್ ಯೋಜನೆಯಲ್ಲಿ ಫಲಾನುಭವಿಗಳ ಅರ್ಜಿಗೆ ಸಂಬಂಧಿಸಿದ ಮಾಹಿತಿಯನ್ನು ಸುಲಭವಾಗಿ ರೈತರಿಗೆ ತಲುಪಿಸಲು ಅನುಕೂಲವಾಗಲು ಇನ್ನು ಮುಂದೆ ಭಾರತ ಸರ್ಕಾರದ ಪಿ.ಎಂ. ಕಿಸಾನ್ ಪೋರ್ಟಲ್ ನಲ್ಲಿ ನೋಂದಣಿಯಾಗುವ ಫಲಾನುಭವಿಗಳಿಗೆ Unique Mobile number ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿರುತ್ತದೆ. ಕೇಂದ್ರ ಸರ್ಕಾರದ ಪಿ.ಎಂ. ಕಿಸಾನ್ ಪೋರ್ಟಲ್‌ನ ಮುಖಪುಟದಲ್ಲಿ Update Mobile Number” (https://pmkisan.gov.in/MobileUpdation_Pub.aspx) 2 ಆಯ್ಕೆಯನ್ನು ನೀಡಲಾಗಿದ್ದು, ಸದರಿ ಫಲಾನುಭವಿಗಳ ಮಾಹಿತಿಯನ್ನು ಈ ಲಿಂಕ್ ನಲ್ಲಿ ನೀಡಲಾಗಿದೆ.

ಹೊಸ ರೈತ ನೋಂದಣಿಗೆ ಅರ್ಜಿ ಸಲ್ಲಿಸುವುದು ಹೇಗೆ:
* PM ಕಿಸಾನ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
* “ಹೊಸ ರೈತ ನೋಂದಣಿ” ಗೆ ಹೋಗಿ.
* ನಿಮ್ಮ ಆಧಾರ್, ಮೊಬೈಲ್ ಸಂಖ್ಯೆ, ಬ್ಯಾಂಕ್ ವಿವರಗಳು ಮತ್ತು ಭೂ ಮಾಲೀಕತ್ವದ ದಾಖಲೆಗಳನ್ನು ನಮೂದಿಸಿ.
* KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಅನುಮೋದನೆಯ ನಂತರ, ನೀವು ಭವಿಷ್ಯದ ಕಂತುಗಳಿಗೆ ಅರ್ಹರಾಗಿರುತ್ತೀರಿ.

ಸಹಾಯವಾಣಿ ಸಂಖ್ಯೆಗಳು:
ಟೋಲ್-ಫ್ರೀ ಸಂಖ್ಯೆ: 1800-115-526
ಪರ್ಯಾಯ ಸಹಾಯವಾಣಿ: 155261
ಇಮೇಲ್ ಬೆಂಬಲ: pmkisan-ict@gov.in

ಹಣ ಜಮೆಯ ಬಗ್ಗೆ ಸ್ಟೇಟಸ್ ಚೆಕ್ ಹೇಗೆ ಮಾಡಬೇಕು?
ಮೊದಲಿಗೆ ಗೂಗಲ್ ಓಪನ್ ಮಾಡಿ.
• ನಂತರ ಅಲ್ಲಿ https://pmkisan.gov.in ಎಂಬ ಲಿಂಕ್ ಹಾಕಿ ಸರ್ಚ್ ಮಾಡಬೇಕು.
• ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್ ಕೇಳುತ್ತದೆ. ಮೊಬೈಲ್ ನಂಬರ್ ಹಾಕಬೇಕು.
• ನಂತರ ಅಲ್ಲಿ ಒಂದು ಕ್ಯಾಪ್ಚಾ ಅಲ್ಲಿ ಬರೆದ ಅಕ್ಷರಗಳನ್ನು ಹಾಕಬೇಕು.
• ನಂತರ get OTP ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅಲ್ಲಿ ಲಿಂಕ್ ಇರುವ ನಿಮ್ಮ ಮೊಬೈಲ್ ನಲ್ಲಿ ಬಂದ OTP ಹಾಕಬೇಕು.
• ನಂತರ ಅಲ್ಲಿ ಫಲಾನುಭವಿಗಳ ಹಣದ ಮಾಹಿತಿ ಸಿಗುತ್ತದೆ.

Leave a Reply

Your email address will not be published. Required fields are marked *