ರೈತ ಮಿತ್ರರೇ ಇವತ್ತು ನಾವು ಒಂದು ಹೊಸ ವಿಷಯದ ಬಗ್ಗೆ ಚರ್ಚಿಸೋಣ. ರೈತರು ತಮ್ಮ ಜಮೀನಿನ ಮೋಜನಿ (ಹದ್ದುಬಸ್ತು) ಪಡೆಯಲು ಸರ್ಕಾರವು ಮಾಡುತ್ತಿರುವ ಎಡವಟ್ಟು. ಹಾಗೂ ರೈತರ ಅಪ್ಲಿಕೇಶನ್ಗಳ ಬಗ್ಗೆ ಸರ್ಕಾರವು ಮಾಡುತ್ತಿರುವ ಲೋಪ ದೋಷಗಳನ್ನು ಇವತ್ತು ನಾವು ಚರ್ಚಿಸೋಣ.
ಹೌದು ರೈತರೇ ಭೂಮಿ ತಂತ್ರಾಂಶದ ನಿರ್ವಹಣೆ ಕಾರ್ಯದಿಂದ ಮೋಜಿಣಿ ಮೇಲೆ ಪರಿಣಾಮ ಬೀರುತ್ತಿದೆ. ಸ್ಥಳಿಯ ಮಟ್ಟದಲ್ಲಿ ಸಮಸ್ಯೆ ಉಲ್ಬಣಿಸುತ್ತಿರುವುದು ಸತ್ಯ. ಆದರೆ, ಎಲ್ಲ ದಾಖಲೆಗಳನ್ನು ಡಿಜಿಟಲೈಜ್ ಮಾಡುತ್ತಿರುವ ಕಾರಣ ಭವಿಷ್ಯದಲ್ಲಿ ರೈತರಿಗೆ, ಸಾರ್ವಜನಿಕರಿಗೆ ಈ ವ್ಯವಸ್ಥೆ ಅನುಕೂಲವಾಗಲಿದೆ. ಕಂದಾಯ ಇಲಾಖೆ ಆಯುಕ್ತರಿಗೆ ಸಮಸ್ಯೆ ಕುರಿತು ವಿವರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆ ಹರಿಯಲಿದೆ.
ದಿನೇದಿನೆ ತಂತ್ರಾಂಶ ಸಮಸ್ಯೆ ಉಲ್ಬಣಿಸುತ್ತಿರುವ ಕಾರಣ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನಾಡಕಚೇರಿ ಸಿಬ್ಬಂದಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮತ್ತು ಜಿಲ್ಲಾ ಮಟ್ಟದ. ಅಧಿಕಾರಿಗಳಿಂದ ಬೆಂಗಳೂರು ಆಯುಕ್ತರ ಕಚೇರಿಗೆ ಪತ್ರ ಬರೆದು ಅದಷ್ಟು ಬೇಗ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡುತ್ತಿದ್ದಾರೆ.
ಮೇಲಧಿಕಾರಿಗಳಿಂದ ಪತ್ರಕ್ಕೆ ಸ್ಪಂದನೆ ಹೊರತುಪಡಿಸಿ ಬೇರೇನೂ ಉತ್ತರ ಬಂದಿಲ್ಲ. ಸಮಸ್ಯೆ ಪರಿಹಾರಕ್ಕೆ ‘ಭೂಮಿ’ ವಿಭಾಗದಲ್ಲಿ ಸಮಾಲೋಚಕರನ್ನು ನೇಮಿಸಿ ಇಲಾಖೆ ಕೈತೊಳೆದುಕೊಂಡಿದೆ.
ಏನೇನು ಸಮಸ್ಯೆ?
- ಜಮೀನು ಪೋಡಿ, 11ಇ ನಕ್ಷೆ ಸಿಗುತ್ತಿಲ್ಲ ಹದ್ದುಬಸ್ತ್ ನಕ್ಷೆ ಕೂಡ ಕೈಗೆ ಸೇರುತ್ತಿಲ್ಲ ಸರ್ವೇ ಇಲಾಖೆ ನಿತ್ಯ ಅಲೆಯುವ ಸ್ಥಿತಿ +1 ತಿಂಗಳಲ್ಲಿ 1.21 ಲಕ್ಷ ಅರ್ಜಿಗಳು ಬಾಕಿ.
- ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮುನ್ಸೂಚನೆ ನೀಡದೆ ಕಂದಾಯ ಮೋಜನಿ-3 ಪರಿಣಾಮ ಜಮೀನಿನ 11ಇ ನಕ್ಷೆ ಹದ್ದುಬಸ್ತು, ಪೋಡಿ ಸಮಸ್ಯೆಗಳು ದಿನೇದಿನೆ ಉಲ್ಬಣಿಸುತ್ತಿದೆ.
- ಒಂದು ತಿಂಗಳಿನಿಂದ ಈ ಸಮಸ್ಯೆ ಎದುರಾಗಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಕ್ತ ಸಮಯದಲ್ಲಿ ಅರ್ಜಿ ವಿಲೇವಾರಿ ಮಾಡಲಾಗುತ್ತಿಲ್ಲ. ರಾತ್ರಿ 11ರಿಂದ 2 ಗಂಟೆಯವರೆಗೂ ಕಚೇರಿಯಲ್ಲೇ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ.
- ಜತೆಗೆ ಸಾರ್ವಜನಿಕರ ಅರ್ಜಿಗಳನ್ನು ಸೂಕ್ತ ಸಮಯದಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗದ ಕಾರಣ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬರುವಂತಾಗಿದೆ. ಜಮೀನು ಹದ್ದುಬಸ್ತು ಸಮೀಕ್ಷೆ 11ಇ ನಕ್ಷೆ, ಪೋಡಿ ಸಂಬಂಧ ಸಾರ್ವಜನಿಕರು ನಾಡಕಚೇರಿ, ಜನಸ್ನೇಹಿ ಕೇಂದ್ರಗಳಲ್ಲಿ ಮೋಜಿಣಿ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸುತ್ತಾರೆ.
ಪಹಣಿ ತಿದ್ದುಪಡಿಯನ್ನು ಹೇಗೆ ಮಾಡಬೇಕು?
ಅದರ ಪ್ರಕ್ರಿಯೆ ಏನು?
• ಭೂಮಿ ಕೇಂದ್ರದಲ್ಲಿರುವ ಅಧಿಕಾರಿಗಳು ನಿಮ್ಮ ಸದರಿ ದಾಖಲೆಗಳನ್ನು ನಿಮಗೆ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಳುಹಿಸುತ್ತಾರೆ.
• ಗ್ರಾಮ ಲೆಕ್ಕಾಧಿಕಾರಿಗಳು ತಮಗೆ ಬಂದಿರುವ ಅರ್ಜಿಯನ್ನು ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ.
• ದಾಖಲೆಗಳು ತಪ್ಪಾಗಿದ್ದಲ್ಲಿ ಅದನ್ನು ತಿರಸ್ಕರಿಸುವ ಹಕ್ಕನ್ನು ಹೊಂದಿರುತ್ತಾರೆ. ಒಂದು ವೇಳೆ ಎಲ್ಲಾ ದಾಖಲೆಗಳು ಸರಿಯಾಗಿದ್ದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಪಹಣಿ ತಿದ್ದುಪಡಿ ಮಾಡಲು ಭೂಮಿ ಕೇಂದ್ರಕ್ಕೆ ಆದೇಶಿಸುವ ಹಕ್ಕನ್ನು ಹೊಂದಿರುತ್ತಾರೆ.
• ಗ್ರಾಮ ಲೆಕ್ಕಾಧಿಕಾರಿಗಳ ಆದೇಶದ ಮೇಲೆ ಭೂಮಿ ಕೇಂದ್ರದ ಅಧಿಕಾರಿಗಳು ನಿಮ್ಮ ಪಹಣಿಯಲ್ಲಿರುವ ಹೆಸರನ್ನು ತಿದ್ದುಪಡಿ ಮಾಡುತ್ತಾರೆ. ಸುಮಾರು ದಿನಗಳ ನಂತರ ತಿದ್ದುಪಡಿ ಆಗಿರುವ ಹೊಸ ಪಹಣಿ ನಿಮ್ಮ ಕೈ ಸೇರುತ್ತದೆ.
ಈ ರೀತಿಯಾಗಿ ನೀವು ಪಹಣಿಯಲ್ಲಿರುವ ಹೆಸರನ್ನು ತಿದ್ದುಪಡಿ ಮಾಡಬಹುದು.
ಏನಿದು ಮೋಜನಿ (ಹದ್ದುಬಸ್ತು) V3 ವೆಬ್ಸೈಟ್?
ಹೌದು ಇದು ಒಂದು ಸರ್ಕಾರದ ವೆಬ್ಸೈಟ್ ಆಗಿದೆ. https://bhoomojini.karnataka.gov.in/index.html. ಇದರ ಮೇಲೆ ಕ್ಲಿಕ್ ಮಾಡಿ. ನಂತರ ಇದರಲ್ಲಿ ರೈತರು ತಮ್ಮ ಜಮೀನಿನ ಮೋಜನಿ (ಹದ್ದುಬಸ್ತು) ಪಡೆಯಲು ಅರ್ಜಿ ಸಲ್ಲಿಸಿದಾಗ ರೈತರಿಗೆ ತಮ್ಮ ಜಮೀನಿನ ಅಳತೆ ಮಾಡಲು ಆಯ್ಕೆ ಆಗಿರುವ. ಸರ್ವೇದಾರರ ಹೆಸರು, ಜಮೀನಿಗೆ ಯಾವ ದಿನಾಂಕದಂದು ಅಳೆಯಲು ಬರುತ್ತಾರೆ ಹಾಗೂ ಅರ್ಜಿ ಸ್ಥಿತಿ ಏನು ಎಂದು ಸಂಪೂರ್ಣ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ.https://bhoomojini.karnataka.gov.in/index.html.
ನಮ್ಮ ಅಕ್ಕಪಕ್ಕದಲ್ಲಿ ಇರುವ ಜಮೀನಿನ ಮಾಹಿತಿ ಪಡೆಯುವುದು ಎಂಬುದು ನಿಖರವಾಗಿ ತಿಳಿದಿಲ್ಲ. ಅದಕ್ಕೆ ಸರ್ಕಾರವು ಈಗ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಏನೆಂದರೆ ಆಧಾರ್ ಕಾರ್ಡ್ ಅನ್ನು ನಿಮ್ಮ ಪಹಣಿ(ಉತಾರ್) ಲಿಂಕ್ ಮಾಡುವುದು. ಒಂದು ವೇಳೆ ನಿಮ್ಮ ಪಹಣಿಗೆ (ಉತಾರಿಗೆ) ಆಧಾರ್ ಕಾರ್ಡ್ ಲಿಂಕ್ ಇಲ್ಲದಿದ್ದರೆ ಯಾವುದೇ ಮಾಹಿತಿ ನಿಖರವಾಗಿ ತಿಳಿಯುವುದಿಲ್ಲ.
ಇದಿಷ್ಟು ಪಹಣಿ ತಿದ್ದುಪಡಿಯ ಬಗ್ಗೆ ಇರುವ ಸಂಪೂರ್ಣ ಮಾಹಿತಿಯಾಗಿದ್ದು. ರೈತರು ಈ ಉಪಯುಕ್ತ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಇದರ ಲಾಭವನ್ನು ಪಡೆದುಕೊಳ್ಳಬೇಕು.
ರಾಜ್ಯದಲ್ಲಿ ರೈತರಿಗೆ ನಿರ್ದಿಷ್ಟ ಸಮಯದಲ್ಲಿ ಸರಕಾರದ ಸೌಲ್ಯಯುತ ಸೌಲಭ್ಯಗಳನ್ನು ತಲುಪಿಸಲು ಪಹಣಿ ಮತ್ತು ಆಧಾರ್‌ನ್ನು ಸೀಡಿಂಗ್ (linking) ಮಾಡುವುದು ಕಡ್ಡಾಯವಾಗಿದೆ. ಆಧಾರ್ ಹಾಗೂ ಆರ್‌ಟಿಸಿ (RTC) ಅಥವಾ ಪಹಣಿಯ ಜೋಡಣೆಯ ಮೂಲಕ ಭೂ-ಸಂಬಂಧಿತ ವಂಚನೆಗಳನ್ನು ತಡೆಯಲು ಸಹಾಯವಾಗಲಿದೆ.ಆರ್‌ಟಿಸಿ ಎಂದರೆ Records of Rights, Tenancy and Crops.
ಇದನ್ನು ಪಹಣಿ ಎಂದು ಕೂಡ ಕರೆಯುತ್ತಾರೆ. ಇದರಲ್ಲಿ ಜಮೀನು ಮಾಲೀಕರ ವಿವರ, ಪ್ರದೇಶ, ಮಣ್ಣಿನ ಪ್ರಕಾರ, ಭೂಮಿಯ ಸ್ವಾಧೀನ ಸ್ವರೂಪ, ಹೊರೆ, ಬೆಳೆದ ಬೆಳೆಗಳು ಮತ್ತು ಇತರೆ ಮಾಹಿತಿಗಳು ಒಳಗೊಂಡಿರುತ್ತವೆ. ಜಮೀನು ಮಾಲೀಕತ್ವದ ವಿಚಾರದಲ್ಲಿ ಖಚಿತತೆಯನ್ನು ಪಡೆಯುವಲ್ಲಿ ಇದೊಂದು ಪ್ರಮುಖ ದಾಖಲೆ.
ರೈತರು ತಮ್ಮ ಜಮೀನಿನ ಪಹಣಿ ಹಾಗೂ ಆಧಾರ್ (RTC – Aadhaar) ವಿವರಗಳನ್ನು landrecords.karnataka.gov.in/service4 ನಲ್ಲಿ ಲಾಗಿನ್ ಮಾಡಿಕೊಂಡು ಆಧಾರ್‌ಗೆ ಲಿಂಕ್ ಮಾಡಿಸಿಕೊಳ್ಳಬಹುದು.ಹಲವಾರು ಸರ್ಕಾರಿ ಸೇವೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಈಗ ಕಡ್ಡಾಯವಾಗಿದೆ. ಪಹಣಿ ಹಾಗೂ ಆಧಾರ್ ದಾಖಲೆಯನ್ನು ಲಿಂಕ್ ಮಾಡಲು ಸಂಬಂಧಪಟ್ಟ ಗ್ರಾಮ ಆಡಳಿತಾಧಿಕಾರಿಯನ್ನು ಸಂಪರ್ಕಿಸುವ ಅವಕಾಶವೂ ಇದೆ.ಸರ್ಕಾರವು ಜಮೀನಿನ ಪಹಣಿಯಲ್ಲಿರುವ ಮಾಲೀಕನ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದನ್ನು ಕಡ್ಡಾಯವನ್ನಾಗಿಸಿದೆ. ರೈತರು ತಮ್ಮ ಪಹಣಿ ಹಾಗೂ ಆಧಾರ್ ದಾಖಲೆಯನ್ನು ಗ್ರಾಮ ಆಡಳಿತಾಧಿಕಾರಿಯ ಮೂಲಕ ಸಹ ಲಿಂಕ್ ಮಾಡಿಸಿಕೊಳ್ಳಬಹುದು.ನಿಮ್ಮ ಆಧಾರ್ ಸಂಖ್ಯೆಯನ್ನು ಪಹಣಿಯೊಂದಿಗೆ ಲಿಂಕ್ ಮಾಡಿದ ನಂತರ, ನಿಮ್ಮ ಜಮೀನಿನ ಯಾವುದೇ ತಿದ್ದುಪಡಿ, ಕೃಷಿ ಇಲಾಖೆಯಿಂದ ನಿಮಗೆ ದೊರಕುವ ಸೌಲಭ್ಯಗಳು ಅಥವಾ ಪರಿಹಾರ ಮೊತ್ತ, ಹಾಗೂ ಪಹಣಿಯಲ್ಲಿ ಬರುವ ಬದಲಾವಣೆಗಳ ಬಗ್ಗೆ ಮೆಸೇಜ್ ನಿಮ್ಮ ಮೊಬೈಲ್ ಗೆ ಸಿಗುತ್ತದೆ.ಮುಂಬರುವ ಎಚ್ಚರಿಕೆ ನಿಮ್ಮ ಪಹಣಿ ಈಗಾಗಲೇ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ದರೆ, ಅದನ್ನು ದೃಢಪಡಿಸುವ ಸಂದೇಶ ನಿಮಗೆ ಬರುತ್ತದೆ.
ಪಹಣಿ ಜೊತೆ ಆಧಾರ್ ಲಿಂಕ್ ಮಾಡುವ ಸ್ಥಳಗಳು:
ರೈತರು ತಮ್ಮ ಮನೆಯಲ್ಲೇ ಕುಳಿತಿದ್ದು ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ landrecords.karnataka.gov.in/service4 ವೆಬ್‌ಸೈಟ್‌ನಲ್ಲಿ ಲಾಗಿನ್ ಮಾಡಿಕೊಂಡು ಪಹಣಿ ಹಾಗೂ ಆಧಾರ್ ನೊಂದಣಿಯನ್ನು ಸುಲಭವಾಗಿ ಲಿಂಕ್ ಮಾಡಿಕೊಳ್ಳಬಹುದು.ಇದೇ ರೀತಿಯಾಗಿ, ತಮ್ಮ ಸಮೀಪದ ಗ್ರಾಮ ಲೆಕ್ಕಿಗರ ಕಚೇರಿಗೆ ಭೇಟಿ ನೀಡಿ ಸಹ ಪಹಣಿ-ಆಧಾರ್ ಲಿಂಕ್ ಮಾಡಲು ಸಹಾಯ ಪಡೆಯಬಹುದು.
ಪಹಣಿ-ಆಧಾರ್ ಲಿಂಕ್ ಮಾಡುವ ಸುಲಭ ವಿಧಾನ:
ನಿಮ್ಮ ಜಮೀನಿನ ಪಹಣಿ (RTC) ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಈಗ ತುಂಬಾ ಸುಲಭವಾಗಿದೆ! ಕೆಲವೇ ಸ್ಟೆಪ್ಸ್‌ಗಳಲ್ಲಿ ಮನೆಯಿಂದಲೇ ಇದನ್ನು ಮಾಡಬಹುದು:
https://landrecords.karnataka.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ.
ನಿಮ್ಮ ಮೊಬೈಲ್ ಸಂಖ್ಯೆ ಮತ್ತು Captcha ಕೋಡ್ ಅನ್ನು ನಮೂದಿಸಿ.
Send OTP ಮೇಲೆ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್ ಗೆ ಬಂದ OTP ಅನ್ನು ನಮೂದಿಸಿ.
ನಿಮ್ಮ ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್‌ನಲ್ಲಿರುವ ಹೆಸರನ್ನು ಸರಿಯಾಗಿ ಭರ್ತಿ ಮಾಡಿ.
“ನಾನು ಇಲ್ಲಿ ಸ್ವಯಂಪ್ರೇರಿತವಾಗಿ ಆಧಾರ್‌ಗಾಗಿ ನನ್ನ ಒಪ್ಪಿಗೆಯನ್ನು ನೀಡುತ್ತೇನೆ” ಎಂಬ ಚೌಕದ ಮೇಲೆ ಟಿಕ್ ಮಾಡಿ.
Verify ಮೇಲೆ ಕ್ಲಿಕ್ ಮಾಡಿ.
“ಆಧಾರ್ ಯಶಸ್ವಿಯಾಗಿ ಪರಿಶೀಲಿಸಲಾಗಿದೆ” ಎಂಬ ಸಂದೇಶ ಬಂದ ಮೇಲೆ, FETCH Details ಮೇಲೆ ಕ್ಲಿಕ್ ಮಾಡಿ.
ಇಷ್ಟು ಮಾಡೋದರಿಂದ ನಿಮ್ಮ ಪಹಣಿ ಮತ್ತು ಆಧಾರ್ ಲಿಂಕ್ ಆಗಿ ಖಚಿತವಾಗುತ್ತದೆ.