Home » ಗೃಹಲಕ್ಷ್ಮಿ ಹಣ ಬಂದಿಲ್ವಾ! ಈ ನಂಬರಿಗೆ ಇವತ್ತೇ ಕರೆ ಮಾಡಿ

ಗೃಹಲಕ್ಷ್ಮಿ ಹಣ ಬಂದಿಲ್ವಾ! ಈ ನಂಬರಿಗೆ ಇವತ್ತೇ ಕರೆ ಮಾಡಿ

ಗೃಹಲಕ್ಷ್ಮಿ ಹಣ :ಆತ್ಮೀಯ ಓದುಗರೇ, ಸರ್ಕಾರದ ಜನಾಕರ್ಷಿತ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಎಲ್ಲ ಜನರ ಮನವನ್ನು ಮುಟ್ಟಿದೆ. ಎಷ್ಟೋ ಕುಟುಂಬಗಳಿಗೆ ಅಷ್ಟು ಇಷ್ಟ ಸಹಾಯವಾಗಿ ಈ ಯೋಜನೆಯು ಆಧಾರ ಸ್ತಂಭವಾಗಿದೆ. ಆದರೆ ಕಳೆದು 7-8 ತಿಂಗಳಿನಿಂದ ಈ ಯೋಜನೆಯು ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ತಾಂತ್ರಿಕ ದೋಷ ಹಾಗೂ ಜನರಿಗೆ ಸರಿಯಾದ ಮಾಹಿತಿಯು ಸಿಗುತ್ತಿಲ್ಲ. ಹಾಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಒಳ್ಳೆಯ ತಂತ್ರಜ್ಞಾನವನ್ನು ಈ ಯೋಜನೆಯೊಂದಿಗೆ ಕೂಡಿಸಿದ್ದಾರೆ. ಈ ಮಹತ್ತರ ಬದಲಾವಣೆ ಗೃಹಿಣಿಯರ ಸಮಸ್ಯೆ ಹಾಗೂ ಗೃಹಲಕ್ಷ್ಮಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಹಾಗೂ ಪರಿಹಾರಗಳನ್ನು ಇಲ್ಲಿ ನಾವು ಪಡೆದುಕೊಳ್ಳಬಹುದು.

ಗೃಹಿಣಿಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಹಾಗೂ ಸಮಸ್ಯೆಗಳಿಗೆ ದೂರನ್ನು ನೀಡಲು ಕಚೇರಿಗಳಿಗೆ ಅಲ್ಲೇದಾಡು ಬೇಕಾಗುತ್ತಿತ್ತು. ಆದರೆ ಈಗ ಗ್ರೂವಿಣಿಯರು ತಮ್ಮ ಮನೆಯಲ್ಲಿ ಕುಳಿತುಕೊಂಡು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ತಮ್ಮ ಮೊಬೈಲ್ ನಿಂದಲೇ ಪರಿಹರಿಸಿಕೊಳ್ಳಬಹುದು. ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕ್ರಮ, ಗೃಹಲಕ್ಷ್ಮಿ ಹಣ ಜಮೆ ವಿಚಾರವಾಗಿ ಮಹಿಳೆಯು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸಹಾಯವಾಣಿ ಪರಿಚಯಿಸಲಾಗಿದೆ. ಈ ಯೋಜನೆಯ ಹಣದ ಬಗ್ಗೆ ಗೊಂದಲಗಳನ್ನು ತಪ್ಪಿಸಲು ಮತ್ತು ನಿಖರ ಮಾಹಿತಿಯನ್ನು ಪಡೆದುಕೊಳ್ಳಲು ಸಹಾಯವಾಣಿಯನ್ನು ಪರಿಚಯಿಸಲಾಗಿದೆ. ಇದರಿಂದ ಮಹಿಳೆಯರು ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ. ಸಹಾಯವಾಣಿ ಸಂಖ್ಯೆಯನ್ನು ತಿಳಿದುಕೊಳ್ಳಲು ಸಂಪೂರ್ಣವಾಗಿ ಅಂಕಣವನ್ನು ಓದಿ.

ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ವಾ.? ತಕ್ಷಣ ಈ ಕೆಲಸ ಮಾಡಿ.!

ಇನ್ನೂ2000 ರೂ ಹಣ ಬರದೇ ಇರುವವರು ಆತಂಕ ಪಡುವ ಅಗತ್ಯವಿಲ್ಲ. ಒಂದೇ ಬಾರಿಗೆ ಕೋಟ್ಯಾಂತರ ಮಹಿಳೆಯರಿಗೆ ಹಣ ಕಳುಹಿಸುತ್ತಿರುವುದರಿಂದ ಹಣ ಜಮಾ ಆಗಿರುವುದಿಲ್ಲ ಅಥವಾ ಇನ್ಯಾವುದೋ ತಾಂತ್ರಿಕ ತೊಂದರೆ ಕಾರಣ SMS ಬಂದಿರುವುದಿಲ್ಲ. ಮಾಹಿತಿ ಪ್ರಕಾರ ಈ ಯೋಜನೆಗೆ ನೋಂದಾಯಿಸಿಕೊಂಡಿದ್ದರೂ ಹಲವಾರು ಮಂದಿ ಈ ಯೋಜನೆಯಿಂದ ವಂಚಿತರಾಗುವ ಸಾಧ್ಯತೆ ಇದೆ.

1) KYC ಅಪ್ಡೇಟ್ ಮಾಡಿಸದವರು, ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮತ್ತು NPCI ಮ್ಯಾಪಿಂಗ್ ಮಾಡಿಸದವರಿಗೆ ಹಣ ಬರುವುದಿಲ್ಲ ಎಂದು ಹೇಳಲಾಗಿದೆ.

2) ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಮಾಹಿತಿಯಲ್ಲಿ ತಿದ್ದುಪಡಿ, ತೊಂದರೆ ಇದ್ದರೆ ಸರಿ ಮಾಡಿಸಿ ಆಧಾರ್ ಕಾರ್ಡ್ ಲಿಂಕ್, NPCI ಮ್ಯಾಪಿಂಗ್ ಮಾಡಿಸಿದರೆ ಅವರು ಮುಂದಿನ ತಿಂಗಳಿನಿಂದ 2000 ರೂ ಪಡೆಯಬಹುದು.

3) ಇದುವರೆಗೆ ಅರ್ಜಿ ಸಲ್ಲಿಸದವರು ಹಾಗೂ ತಾಂತ್ರಿಕ ತೊಂದರೆಯಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರುವವರು ಎಲ್ಲವನ್ನು ಸರಿಮಾಡಿಕೊಂಡು ಅರ್ಜಿ ಸಲ್ಲಿಸಿದರೆ ಸೆಪ್ಟೆಂಬರ್ ನಿಂದ ಹಣ ಪಡೆಯಬಹುದು.

ಇದೀಗ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಲಿಸ್ಟ್ ನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಈ ವಿಧಾನದ ಮೂಲಕ ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯಾ..ಇಲ್ಲವಾ ಎಂದು ಚೆಕ್ ಮಾಡಿಕೊಳ್ಳಬಹುದು.

ಚೆಕ್ ಮಾಡುವ ವಿಧಾನ

1) ಮೊದಲು ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿಕೊಡಬೇಕು. https://ahara.kar.nic.in/WebForms/Show_Village_List.aspx

2) ಮೆನು ಬಾರ್ ಅಲ್ಲಿ ‘E service’ ಎನ್ನುವ ಆಯ್ಕೆ ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿ

3) ನಂತರ ಪೇಜ್ ನ ಎಡಭಾಗದಲ್ಲಿ ಎಲ್ಲಾ ಸೇವೆಗಳ ಲಿಸ್ಟ್ ಬರುತ್ತದೆ. ಅದರಲ್ಲಿ ಇ-ರೇಷನ್ ಕಾರ್ಡ್ ಎನ್ನುವುದನ್ನು ಸೆಲೆಕ್ಟ್ ಮಾಡಿ ಮತ್ತಷ್ಟು ಸೇವೆಗಳ ವಿವರ ಬರುತ್ತದೆ ಅದರಲ್ಲಿ ವಿಲೇಜ್ ಲಿಸ್ಟ್ ಎನ್ನುವುದನ್ನು ಕ್ಲಿಕ್ ಮಾಡಿ. ಅಲ್ಲಿ ಜಿಲ್ಲಾವಾರು ಲಿಂಕ್ ಇರುತ್ತದೆ, ಅದರಲ್ಲಿ ನಿಮ್ಮ ಜಿಲ್ಲೆ ಇರುವ ಲಿಂಕ್ ಸೆಲೆಕ್ಟ್ ಮಾಡಿ. ನಂತರ ತಾಲೂಕು, ಗ್ರಾಮ ಪಂಚಾಯತ್, ವಿಲೇಜ್ ಸೆಲೆಕ್ಟ್ ಮಾಡಿ ನಂತರ GO ಆಪ್ಶನ್ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಊರಿನ ಫಲಾನುಭವಿಗಳ ಪಟ್ಟಿ ಬರುತ್ತದೆ. ಅಲ್ಲಿ ನಿಮ್ಮ ಹೆಸರನ್ನು ಸರ್ಚ್ ಮಾಡಬಹುದು. ಒಂದು ವೇಳೆ ಪಟ್ಟಿ ಓಪನ್ ಆಗಿದ್ದರೆ ಸರ್ವರ್ ತೊಂದರೆ ಇರುತ್ತದೆ. ಸ್ವಲ್ಪ ಸಮಯದ ಬಳಿಕ ಸರ್ಚ್ ಮಾಡಿ.

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಚಾಟ್‌ಬಾಟ್ ಲಿಂಕ್ ಆಗಿರುವ ವಾಟ್ಸಾಪ್ ಸಂಖ್ಯೆ 8147500500 ಅನ್ನು ಸರ್ಕಾರ ಒದಗಿಸಿದೆ. ವಾಟ್ಸಾಪ್ ಬಳಕೆದಾರರು ತಮ್ಮ ವಿವರಗಳನ್ನು ಈ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಚಾಟ್‌ಬಾಟ್ ಅರ್ಜಿ ಸಲ್ಲಿಸಲು ಬಳಕೆದಾರರಿಗೆ ಸಹಾಯ ಮಾಡಲಿದೆ ಮತ್ತು ಮಾರ್ಗದರ್ಶನ ನೀಡಲಿದೆ.

Leave a Reply

Your email address will not be published. Required fields are marked *