Gruhlaxmi : ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ಮತ್ತೊಮ್ಮೆ ಸಿಹಿ ಸುದ್ದಿ ಸಿಗಲಿದೆ. 25ನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಜನವರಿ 10 ಮತ್ತು 12ರ ಮಧ್ಯದಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗುವ ನಿರೀಕ್ಷೆಯಿದೆ. ಅಂದರೆ ಸಂಕ್ರಾಂತಿ ಹಬ್ಬದ ವೇಳೆಗೆ ಗೃಹಲಕ್ಷ್ಮಿಯ 25 ನೇ ಕಂತು ಜಮಾ ಆಗುವ ಸಾಧ್ಯತೆಯಿದೆ. ಸಿದ್ದರಾಮಯ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಲಕ್ಷಾಂತರ ಗೃಹಿಣಿಯರು ಎದುರು ನೋಡುತ್ತಿದ್ದಾರೆ. ಹಲವಾರು ಮಂದಿ ಗೃಹಿಣಿಯರು ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಫ್ರಿಡ್ಜ್, ಟಿವಿ ಹಾಗೂ ಅಂಗಡಿಗಳನ್ನು ಹಾಕಿಕೊಳ್ಳುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.
ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕ್ರಮ: ಗೃಹಲಕ್ಷ್ಮಿ ಹಣ ಜಮೆ ವಿಚಾರವಾಗಿ ಮಹಿಳೆಯು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸಹಾಯವಾಣಿ ಪರಿಚಯಿಸಲಾಗಿದೆ. ಈ ಯೋಜನೆಯ ಹಣದ ಬಗ್ಗೆ ಗೊಂದಲಗಳನ್ನು ತಪ್ಪಿಸಲು ಮತ್ತು ನಿಖರ ಮಾಹಿತಿಯನ್ನು ಪಡೆದುಕೊಳ್ಳಲು 181 ಸಹಾಯವಾಣಿಯನ್ನು ಪರಿಚಯಿಸಲಾಗಿದೆ. ಇದರಿಂದ ಮಹಿಳೆಯರು ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ.
ಗೃಹಲಕ್ಷ್ಮಿ (Gruhlaxmi) ಹಣ ಬರುತ್ತಿಲ್ಲ ಎಂದು ಮಹಿಳೆಯರು ಸರ್ಕಾರಿ ಕಚೇರಿಗಳಿಗೆ ಇನ್ಮುಂದೆ ಅಲೆಯುವ ಅವಶ್ಯಕತೆ ಇರುವುದಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಇದೀಗ 181 ಸಂಖ್ಯೆಯ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಫಲಾನುಭವಿಗಳು ಉಚಿತ ದೂರವಾಣಿ ಸಂಖ್ಯೆ 181ಕ್ಕೆ ಕರೆ ಮಾಡಬಹುದು. ಸಂಬಂಧಪಟ್ಟ ಅಧಿಕಾರಿಗಳು ನಿಮ್ಮ ತಾಲೂಕಿನ ಮಾಹಿತಿ ಪಡೆದುಕೊಂಡು ಸಮಸ್ಯೆಗೆ ಕಾರಣ ಮತ್ತು ಪರಿಹಾರದ ಬಗ್ಗೆ ನಿಖರ ಮಾಹಿತಿಯನ್ನು ನೀಡಲಿದ್ದಾರೆ.
Gruhlaxmi ಯೋಜನೆಯ ಮಾರ್ಗಸೂಚಿ, ಮಾನದಂಡಗಳು
- ಈ ಯೋಜನೆಯ ಫಲಾನುಭವಿಗಳು 2023ರ ಜುಲೈ 16 ರಿಂದ ಅರ್ಜಿ ಸಲ್ಲಿಸಬೇಕು. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್‌ನಲ್ಲಿ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
- ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ನೀಡುವ ಅಂತ್ಯೋದರ, ಬಿಪಿಎಲ್, ಎಪಿಎಲ್ ಪಡಿತ ಚೀಟಿಗಳಲ್ಲಿ ಕುಟುಂಬದ ಯಾಜಮಾನಿ ಎಂದು ಮಹಿಳೆಯನ್ನು ಗುರುತಿಸಲಾಗಿದ್ದರೆ ಮಾತ್ರ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿದ್ದಾರೆ.
- ಒಂದು ಕುಟುಂಬದಲ್ಲಿ ಒಂದಕ್ಕಿಂತ ಅಧಿಕ ಮಹಿಳೆಯರು ಇದ್ದರೆ ಎಲ್ಲರಿಗೂ ಈ ಯೋಜನೆಯ ಲಾಭ ಲಭ್ಯವಾಗುವುದಿಲ್ಲ. ಮನೆಯ ಯಜಮಾನಿ ಎಂದು ಗುರುತಿಸಲ್ಪಟ್ಟ ಒಬ್ಬರಿಗೆ ಮಾತ್ರ ಈ ಯೋಜನೆಯ ಮೂಲಕ ಎರಡು ಸಾವಿರ ರೂಪಾಯಿ ಲಭ್ಯವಾಗುತ್ತದೆ.
- ಆನ್‌ಲೈನ್ ಆಪ್, ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಸ್ಥಳೀಯವಾಗಿ ಕಾಂಗ್ರೆಸ್ ಕಾರ್ಯಕರ್ತರು ಈ ಅರ್ಜಿ ಸಲ್ಲಿಸುವ ಕಾರ್ಯವನ್ನು ಮಾಡುತ್ತಿದ್ದು, ಅವರ ಸಹಾಯ ಪಡೆಯಬಹುದಾಗಿದೆ.
- ಆರಂಭದಲ್ಲಿ ಯೋಜನೆಯ ಲಾಭ ಪಡೆಯಬೇಕಾದರೆ ಫಲಾನುಭವಿಗಳ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಕಡ್ಡಾಯ ಎಂದು ಹೇಳಲಾಗಿತ್ತು. ಆದರೆ ಈಗ ಕಡ್ಡಾಯವಲ್ಲ ಎಂದು ಸರ್ಕಾರ ತಿಳಿಸಿದೆ.
- ನೀವು ಅರ್ಜಿ ಸಲ್ಲಿಸಿದ ಬಳಿಕ ಅರ್ಜಿ ಅನುಮೋದನೆಯಾಗಿ ನಿಮಗೆ ಆಗಸ್ಟ್‌ನಲ್ಲಿ ಹಣ ಲಭ್ಯವಾಗಬಹುದು. ಆದರೆ ಬಳಿಕ ನೀವು ಸಲ್ಲಿಸಿದ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿ ನೀವು ನಕಲಿ ದಾಖಲೆ ಸಲ್ಲಿಸಿರುವುದು ಖಚಿತವಾದರೆ, ಅಥವಾ ನೀವು ತಪ್ಪು ಮಾಹಿತಿ ನೀಡಿದ್ದರೆ, ನಿಮಗೆ ನೀಡಿದ ಹಣವನ್ನು ಹಿಂಪಡೆಯಲಾಗುತ್ತದೆ. ಹಾಗೆಯೇ ನಿಮ್ಮ ವಿರುದ್ಧ ಸೂಕ್ತವಾದ ಕ್ರಮವನ್ನು ಕೈಗೊಳ್ಳಲಾಗುತ್ತದೆ.

Bele hani : 116 ಕೋಟಿ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಿದೆ ಸರ್ಕಾರ
ಯಾವ ಬೆಳೆಗೆ ಎಷ್ಟು ಬೆಳೆವಿಮೆ ಜಮೆಯಾಗುತ್ತೇ? ನಿಮಗೆ ಎಷ್ಟಾಗಿದೆ! ನಿಮ್ಮ ಮೊಬೈಲ್ ನಲ್ಲಿ ನೋಡಿ
