Home » ಗ್ರಾಮ ಪಂಚಾಯಿತಿಯಲ್ಲಿ ಸಿಗುವ ಸೌಲಭ್ಯಗಳು

ಗ್ರಾಮ ಪಂಚಾಯಿತಿಯಲ್ಲಿ ಸಿಗುವ ಸೌಲಭ್ಯಗಳು

ನಮಸ್ಕಾರ ಪ್ರೀಯ ರೈತರೇ ಇವತ್ತು ನಾವು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ವಾಸ ಮಾಡುವ ಜನರು ನಿಮ್ಮ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯತಿಯಲ್ಲಿ ಹಲವು ಸೌಲಭ್ಯಗಳನ್ನು ಪಡೆಯಬಹುದು. ಹಾಗಾದ್ರೆ ಯಾವೆಲ್ಲಾ ಸೇವೆಗಳು ನಿಮಗೆ ಲಭ್ಯ ಆಗಲಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಸಂಪೂರ್ಣ ತಿಳಿಯೋಣ.

ಗ್ರಾಮ ಪಂಚಾಯಿತಿ ಸೇವೆಗಳ ಕುರಿತಂತೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ, ಇದೀಗ ಗ್ರಾಮ ಪಂಚಾಯಿತಿ ಸೇವೆಗಳಿಗೆ ಅರ್ಜಿ ಸಲ್ಲಿಕೆ ಮತ್ತಷ್ಟು ಸುಲಭಗೊಳಿಸಲಾಗಿದೆ. ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಅಹವಾಲು ದಾಖಲಿಸುವುದು ಅತಿ ಮುಖ್ಯ ಆಗುತ್ತದೆ. ಅಹವಾಲು ಸಲ್ಲಿಸುವುದಕ್ಕಾಗಿ ಸರಳ, ಸುಲಭ ಹಾಗೂ ಸಮರ್ಥ ವ್ಯವಸ್ಥೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಕೈಗೊಂಡಿದೆ.

ಇಲಾಖಾ ಸೇವೆಗಳು

  • ಆಹಾರ ಮತ್ತು ನಾಗರಿಕ ಪೂರೈಕೆದಾರರು – 1967.
  • ಬಿಬಿಎಂಪಿ – 1533.
  • ಕಾರ್ಮಿಕ ಇಲಾಖೆ – 155214.
  • ಸಮಾಜ ಕಲ್ಯಾಣ – 080-22340956.
  • RDPR -8277506000.

ತುರ್ತು ಸೇವೆಗಳು –

  1. ಆರೋಗ್ಯ ಮತ್ತು ಕುಟುಂಬ ಕಲ್ಯಾಣ – 104.
  2. ಆಂಬ್ಯುಲೆನ್ಸ್ – 102/108.
  3. ಮಹಿಳೆಯರು – 181.
  4. ಪೋಲೀಸ್ – 100.
  5. COVID-19 – 1533.
  6. ಟ್ರಾಫಿಕ್ – 080-22942113 -9480801800.
  7. ಕಂದಾಯ ಇಲಾಖೆ – 1090 14567.

ಯಾವೆಲ್ಲಾ ಸೌಲಭ್ಯಗಳು ಇವೆ?

1. ತೆರಿಗೆ ಪಾವತಿ.
2. ಕಟ್ಟಡ ಪರವಾನಗಿ.
3. ವಾಣಿಜ್ಯ ಪರವಾನಗಿ.
4. ಕುಡಿಯುವ ನೀರಿನ ನಿರ್ವಹಣೆ, ಸಣ್ಣ ಪ್ರಮಾಣದ ರಿಪೇರಿಗಳು.
5. ಬೀದಿ ದೀಪಗಳ ನಿರ್ವಹಣೆಗೆ, ಈ ಸಂಬಂಧ ಸಣ್ಣ ಪ್ರಮಾಣದ ರಿಪೇರಿಗಳು.
6. ಗ್ರಾಮ ನೌರ್ಮಲ್ಯ.
7. ಜನಗಣತಿ, ಜಾನುವಾರು ಗಣತಿ, ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗೆ ದಸ್ತಾವೇಜುಗಳು ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಕಡ್ಡಾಯವಾಗಿ ನಿರ್ವಹಿಸಬೇಕಾದ ಇತರ ದಸ್ತಾವೇಜುಗಳನ್ನು ನೀಡುವುದು.
8. ಅಕುಶಲ ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸುವುದು (ಎಂಜಿಎನ್‌ಆರ್‌ ಇಜಿಎಸ್‌).
9. ಎಸ್ಕಾಂಗೆ ನಿರಾಪೇಕ್ಷಣಾ ಪ್ರಮಾಣ ಪತ್ರ.
10. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಗಳಲ್ಲಿ ಕೆಲಸ ಮಾಡಲು ಅರ್ಜಿ ಸಲ್ಲಿಸಿದ ಅಕುಶಲ ಕಾರ್ಮಿಕರ ನೋಂದಣಿ ಮತ್ತು ಉದ್ಯೋಗ ಚೀಟಿಗಳನ್ನು ನೀಡುವುದು.
11. ನಮೂನೆ- 9/ 11ಎ.
12. ನಮೂನೆ – 11(ಬಿ).

ಗ್ರಾಮ ಪಂಚಾಯತ್ ವ್ಯವಸ್ಥೆಯ ಪ್ರಾಥಮಿಕ ಪ್ರಯೋಜನಗಳಲ್ಲಿ ಒಂದು ಅದು ಗ್ರಾಮೀಣ ಸಮುದಾಯಗಳಿಗೆ ನೀಡುವ ನೇರ ಪ್ರಾತಿನಿಧ್ಯ ಮತ್ತು ಸಬಲೀಕರಣ. ಈ ವ್ಯವಸ್ಥೆಯು ಹಳ್ಳಿಗಳ ನಿವಾಸಿಗಳು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ, ಅವರ ಧ್ವನಿಗಳು ಮತ್ತು ಕಳವಳಗಳನ್ನು ಸ್ಥಳೀಯ ಮಟ್ಟದಲ್ಲಿ ಕೇಳಲಾಗುತ್ತದೆ ಮತ್ತು ಪರಿಹರಿಸಲಾಗುತ್ತದೆ ಎಂದು ಖಚಿತಪಡಿಸುತ್ತದೆ.

ಗ್ರಾಮೀಣ ಜನರಿಗೆ ಗುಡ್‌ ನ್ಯೂಸ್‌: ಸರ್ಕಾರವು ಬಿ-ಖಾತಾ ನೀಡುವ ಅಭಿಯಾನ ಹಮ್ಮಿಕೊಂಡಿದೆ. ಗ್ರಾಮೀಣ ಆಸ್ತಿ ಮಾಲೀಕರಿಗೆ ಬಿ ಖಾತಾ ನೀಡುವ ಕುರಿತು ಸರ್ಕಾರ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವೊಂದನ್ನು ಇತ್ತೀಚೆಗಷ್ಟೇ ತೆಗೆದುಕೊಂಡಿದೆ. ಈ ಮೂಲಕ ಗುಡ್‌ ನ್ಯೂಸ್‌ ಕೂಡ ಕೊಟ್ಟಿದೆ.

ಅನಧಿಕೃತ ಬಡಾವಣೆ, ನಿವೇಶನ, ಮನೆಗಳಲ್ಲಿ ಜೀವನ ನಡೆಸುತ್ತಿರುವ ಗ್ರಾಮೀಣ ಪ್ರದೇಶದ ಜನತೆಗೆ ಬಿ ನಮೂನೆ ಇ-ಖಾತಾ ನೀಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕ -2025ಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಗ್ರಾಮ ಪಂಚಾಯತ್ ವ್ಯವಸ್ಥೆಯು ಪ್ರಜಾಪ್ರಭುತ್ವ ಮತ್ತು ವಿಕೇಂದ್ರೀಕರಣದ ತತ್ವಗಳ ಅಭಿವ್ಯಕ್ತಿಯಾಗಿದೆ. ಇದು ಆಡಳಿತವನ್ನು ಜನರಿಗೆ ಹತ್ತಿರ ತರುತ್ತದೆ, ಅವರು ನಿರ್ಧಾರ ತೆಗೆದುಕೊಳ್ಳುವಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ತಮ್ಮ ಚುನಾಯಿತ ಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿ ಮಾಡಲು ಅನುವು ಮಾಡಿಕೊಡುತ್ತದೆ.

 

ಗ್ರಾಮ ಪಂಚಾಯಿತಿ ಸೇವೆ

ಸರ್ಕಾರದ ಈ ನಿರ್ಧಾರದ ಅನ್ವಯದ ಗ್ರಾಮೀಣ ಪ್ರದೇಶದ ಅನಧಿಕೃತ ಆಸ್ತಿಗಳಿಗೆ ಶುಲ್ಕ ಪಡೆದುಕೊಂಡು ಬಿ ನಮೂನೆಯಲ್ಲಿ ಇ-ಖಾತಾ ವಿತರಿಸಲಾಗುತ್ತದೆ. ಈ ಮೂಲಕ ಅವುಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗುವುದು. ಈ ಕ್ರಮದಿಂದ ಆಸ್ತಿ ಮಾಲೀಕರ ಆತಂಕ ದೂರ ಆದಂಯತಾಗಲಿದೆ. ಜೊತೆಗೆ ಆಯಾ ಗ್ರಾಮ ಪಂಚಾಯತಿಗಳಿಗೆ ಆದಾಯ ಹೆಚ್ಚಲಿದೆ. ಸೌಲಭ್ಯ ಕಲ್ಪಿಸಲು ಸಹ ಅನುಕೂಲ ಆಗುತ್ತದೆ.

ಗ್ರಾಮೀಣ ಪ್ರದೇಶದಲ್ಲಿ 96 ಲಕ್ಷ ಅನಧಿಕೃತ ಆಸ್ತಿಗಳಿವೆ ಎಂದು ಹೇಳಲಾಗಿದ್ದು, ಗ್ರಾಮ ಪಂಚಾಯಿತಿಗಳು ಅಗತ್ಯ ಸೌಲಭ್ಯ ಕಲ್ಪಿಸಿದ್ದರೂ ಇ- ಸ್ವತ್ತು, ಗುರುತಿನ ಸಂಖ್ಯೆ ಅಥವಾ ಬಿ -ಖಾತಾ ಇಲ್ಲದ ಕಾರಣ ತೆರಿಗೆ ವಸೂಲಿ ಮಾಡಲು ಸಮಸ್ಯೆ ಆಗಿತ್ತು. ಆಸ್ತಿಗಳನ್ನು ಹೊಂದಿದ ಮಾಲೀಕರಿಗೆ ವಹಿವಾಟು, ಬ್ಯಾಂಕ್ ಸಾಲ ಪಡೆಯಲು ತೊಂದರೆ ಆಗಿತ್ತು. ಇ-ಖಾತಾ ನೀಡುವುದರಿಂದ ಈ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಲಾಗಿದೆ.

ಗ್ರಾಮೀಣ ಭಾರತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವಲ್ಲಿ ಗ್ರಾಮ ಪಂಚಾಯತ್ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ. ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸುವ ಮೂಲಕ, ಗ್ರಾಮ ಪಂಚಾಯತ್‌ಗಳು ಕೃಷಿ, ಪಶುಸಂಗೋಪನೆ, ಗುಡಿ ಕೈಗಾರಿಕೆಗಳು ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಉಪಕ್ರಮಗಳನ್ನು ಪ್ರೋತ್ಸಾಹಿಸುತ್ತವೆ.

ಕೇಂದ್ರ ಸರ್ಕಾರದ ನೆರವಿನೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ರಾಜ್ಯದಲ್ಲಿ ಹೊಸದಾಗಿ 6,599 ‘ಗ್ರಾಮ ಗ್ರಂಥಾಲಯ’ಗಳನ್ನು ತೆರೆಯಲು ಮುಂದಾಗಿದೆ.

ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಂಡವಾಳ ಹೂಡಿಕೆಗಾಗಿ ನೀಡುವ ಹಣಕಾಸು ನೆರವು ಯೋಜನೆಯ (ಎಸ್‌.ಎ.ಎಸ್‌.ಸಿ.ಐ) ‘ಮಕ್ಕಳು ಮತ್ತು ಹದಿಹರೆಯದವರಿಗಾಗಿ ಗ್ರಂಥಾಲಯಗಳು ಮತ್ತು ಡಿಜಿಟಲ್ ಮೂಲಸೌಕರ್ಯ’ ಕಾರ್ಯಕ್ರಮದಡಿ 31 ಜಿಲ್ಲೆಗಳಲ್ಲಿ ‘ಗ್ರಾಮ ಗ್ರಂಥಾಲಯ’ಗಳನ್ನು ಪ್ರಾರಂಭಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

ಪ್ರತಿ ಗ್ರಂಥಾಲಯಕ್ಕೆ ತಲಾ ₹2 ಲಕ್ಷ ಮೊತ್ತದ ಪುಸ್ತಕಗಳನ್ನು ‘ನ್ಯಾಷನಲ್‌ ಬುಕ್‌ ಟ್ರಸ್ಟ್‌ ಇಂಡಿಯಾ’ದಿಂದ ಖರೀದಿಸಲಾಗಿದ್ದು, ಆಯಾ ಜಿಲ್ಲಾ ಪಂಚಾಯಿತಿಗಳಿಗೆ ಪುಸ್ತಕಗಳು ಸರಬರಾಜಾಗಿವೆ. 2,040 ಕನ್ನಡ, 627 ಇಂಗ್ಲಿಷ್‌ ಹಾಗೂ 20 ಕಲಿಕಾ ವಿಜ್ಞಾನ ಪುಸ್ತಕಗಳು ಸೇರಿ ಒಟ್ಟು 2,687 ಕೃತಿಗಳು ಪ್ರತಿ ಗ್ರಂಥಾಲಯಕ್ಕೆ ಶೀಘ್ರದಲ್ಲೇ ಹಂಚಿಕೆಯಾಗಲಿವೆ.

‘ಮಕ್ಕಳ ಕತೆ, ವಿಜ್ಞಾನ ಮತ್ತು ವೈಜ್ಞಾನಿಕ ಚಟುವಟಿಕೆ, ಜೀವನ ಚರಿತ್ರೆ, ಮಕ್ಕಳು ಮತ್ತು ಸಮುದಾಯಕ್ಕಾಗಿ ಚಟುವಟಿಕೆಗಳು ಸೇರಿದಂತೆ ವೈವಿಧ್ಯಮಯ ವಿಷಯಗಳ ಪುಸ್ತಕಗಳು ಗ್ರಂಥಾಲಯಗಳಿಗೆ ಸಿಗಲಿವೆ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ಮತ್ತು ಡಿಜಿಟಲ್ ಕೌಶಲ ಬೆಳೆಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಗ್ರಂಥಾಲಯಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ಒದಗಿಸುತ್ತದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು.

ಕಂಪ್ಯೂಟರ್‌, ಪೀಠೋಪಕರಣ:

ನೂತನ ಗ್ರಾಮ ಗ್ರಂಥಾಲಯಗಳಿಗೆ ₹1 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್‌ ಮತ್ತು ಯುಪಿಎಸ್‌ ಹಾಗೂ ₹1 ಲಕ್ಷ ವೆಚ್ಚದಲ್ಲಿ ಪಿಠೋಪಕರಣಗಳ ಸೌಲಭ್ಯಗಳು ದೊರಕಲಿವೆ. ಪೀಠೋಪಕರಣಗಳನ್ನು ಖರೀದಿಸಲು ಪಂಚಾಯತ್‌ ರಾಜ್‌ ಆಯುಕ್ತಾಲಯದಿಂದ ಜಿಲ್ಲಾ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಆದೇಶಿಸಿದೆ.

ಕಟ್ಟಡಗಳ ನವೀಕರಣ:

‘ಹೊಸ ಗ್ರಂಥಾಲಯಗಳಿಗೆ ಗುರುತಿಸಲಾದ ಕಟ್ಟಡಗಳಿಗೆ ಅಗತ್ಯವಿರುವ ದುರಸ್ತಿ, ನವೀಕರಣ, ವಿದ್ಯುತ್‌ ಮತ್ತು ಇಂಟರ್‌ನೆಟ್‌ ಸಂಪರ್ಕ, ಕುಡಿಯುವ ನೀರು, ಫ್ಯಾನ್‌ ಸೇರಿ ಮೂಲಸೌಲಭ್ಯಗಳನ್ನು ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲದಿಂದ ಅಥವಾ ಲಭ್ಯವಿರುವ ಇತರೆ ಅನುದಾನಗಳನ್ನು ಬಳಸಿ ಕಲ್ಪಿಸಬೇಕು’ ಎಂದು ಪಂಚಾಯತ್‌ ರಾಜ್‌ ಆಯುಕ್ತಾಲಯದ ಆಯುಕ್ತರು ಆದೇಶಿಸಿದ್ದಾರೆ.

– ಲಕ್ಷ್ಮಿ ಪಿ. ಉಪ ಕಾರ್ಯದರ್ಶಿ (ಅಭಿವೃದ್ಧಿ) ಮಂಡ್ಯ ಜಿಪಂಮಂಡ್ಯ ಜಿಲ್ಲೆಯಲ್ಲಿ 257 ಕಟ್ಟಡಗಳನ್ನು ಗುರುತಿಸಿದ್ದೇವೆ. ಪುಸ್ತಕ ಮತ್ತು ಪೀಠೋಪಕರಣಗಳನ್ನು ಶೀಘ್ರದಲ್ಲೇ ಗ್ರಾಮ ಗ್ರಂಥಾಲಯಗಳಿಗೆ ಹಂಚಿಕೆ ಮಾಡುತ್ತೇವೆ.

One thought on “ಗ್ರಾಮ ಪಂಚಾಯಿತಿಯಲ್ಲಿ ಸಿಗುವ ಸೌಲಭ್ಯಗಳು

Leave a Reply

Your email address will not be published. Required fields are marked *