Home » ರೈತರಿಗೂ ಪೆನ್ಶನ್ ಬೇಕಿದ್ದರೆ ಇಲ್ಲಿದೆ ಸೂಪರ್ ಯೋಜನೆ: ಸಂಪೂರ್ಣ ಮಾಹಿತಿ ನೋಡಿ

ರೈತರಿಗೂ ಪೆನ್ಶನ್ ಬೇಕಿದ್ದರೆ ಇಲ್ಲಿದೆ ಸೂಪರ್ ಯೋಜನೆ: ಸಂಪೂರ್ಣ ಮಾಹಿತಿ ನೋಡಿ

ರೈತರಿಗೂ ಪೆನ್ಶನ್ : ರೈತರಿಗೆ ಪಿಂಚಣಿ (ಪೆನ್ಶನ್) ನೀಡಲು ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಮಾನ್ ಧನ್ ಯೋಜನೆಯನ್ನು ಆರಂಭಿಸಲಾಗಿದೆ. ಹೌದು, ಈ ಯೋಜನೆ ಅಡಿಯಲ್ಲಿ ರೈತರಿಗೆ ಪ್ರತಿ ತಿಂಗಳು ಪೆನ್ಸನ್ ಸಿಗುತ್ತದೆ. ಯಾವ ಯಾವ ರೈತರಿಗೆ ಈ ಸೌಲಭ್ಯ ಸಿಗಲಿದೆ ಇದಕ್ಕಾಗಿ ರೈತರೇನು ಮಾಡಬೇಕು ಇದಕ್ಕೆ ವಯಸ್ಸು ಎಷ್ಟಿರಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಿಎಂ ಕಿಸಾನ್ ಮಾನ್ ಧನ್ ಯೋಜನೆ ಅಡಿಯಲ್ಲಿ 18 ರಿಂದ 40 ವಯೋಮಾನದ ಸಣ್ಣ ಮತ್ತು ಅತೀ ಸಣ್ಣ ರೈತರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಯೋಜನೆ ಅಡಿಯಲ್ಲಿ 60 ವಯಸ್ಸಾದ ಮೇಲೆ ಕನಿಷ್ಟ ತಿಂಗಳಿಗೆ 3 ಸಾವಿರ ರೂಪಾಯಿ ಅಂದರೆ ವರ್ಷಕ್ಕೆ 36 ಸಾವಿರ ರೂಪಾಯಿ ಪೆನ್ಶನ್ ಸಿಗುತ್ತದೆ ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

ಪಿಎಂ ಕಿಸಾನ್ ಮಾನ್ ಧನ್ ಯೋಜನೆ ಅಡಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡ ನಂತರ ಒಂದು ವೇಳೆ ಆಕಸ್ಮಿಕವಾಗಿ ಮರಣ ಹೊಂದಿದ್ದರೆ ಅವರ ಪತ್ನಿಗೆ ಶೇ. 50 ರಷ್ಟು ಪಿಂಚಣಿ ನೀಡಲಾಗುತ್ತದೆ. ಈ ಪಿಂಚಣಿ ತನ್ನ ಪತ್ನಿಗೆ ಮಾತ್ರ ಅನ್ವಯವಾಗುತ್ತದೆ. 18 ರಿಂದ 40 ವಯೋಮಾನದ ರೈತರು ತಮ್ಮ ಹೆಸರನ್ನು ನೋಂದಾಯಿಸಿ ಈ ಸೌಲಭ್ಯ ಪಡೆಯಬಹುದು.

ಕೇಂದ್ರ ಸರ್ಕಾರವು ರೈತರಿಗೆ 2019ರ ಸೆಪ್ಟೆಂಬರ್ 12 ರಂದು ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆ ಅಡಿಯಲ್ಲಿ ದೇಶದ ಎಲ್ಲಾ ಸಣ್ಣ ಮತ್ತು ಅತೀ ಸಣ್ಣ ರೈತರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.

ಪಿಎಂ ಕಿಸಾನ್ ಮಾನ್ ಧನ್ ಯೋಜನೆಗೆ ಎಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು?

18 ರಿಂದ 40 ವಯೋಮಾನದ ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (ಸಿಎಸ್.ಸಿ) ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಪಿಎಂ ಕಿಸಾನ್ ಮಾನ್ ಧನ್ ಯೋಜನೆಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಭೂ ದಾಖಲೆಗಳು, ಪಾಸ್ ಪೋರ್ಟ್ ಅಳತೆಯ ಫೋಟೋ ದೊಂದಿಗೆ ನಿಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ನಿಮ್ಮ ಬ್ಯಾಂಕ್ ಖಾತೆಯಿಂದ ಮಾಸಿಕ ಮೊತ್ತವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸುವ ಅರ್ಜಿ ಅನ್ನು ಸಹ ನೀಡಲಾಗುತ್ತದೆ. ಅದನ್ನು ಭರ್ತಿ ಮಾಡಿ ನೀಡಬೇಕು. ಹೌದು ಈ ಪ್ರಕಾರ ಪ್ರತಿ ತಿಂಗಳಿಗೆ ವಯಸ್ಸಿಗನುಗುಣವಾಗಿ 55 ರಿಂದ 200 ರೂಪಾಯಿ ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ.18 ವಯಸ್ಸಿನ ರೈತರು ತಿಂಗಳಿಗೆ 55 ರೂಪಾಯಿ ಹಣ ಪಾವತಿಸಿದರೆ ಕೇಂದ್ರ ಸರ್ಕಾರವು ತಿಂಗಳಿಗೆ 55 ರೂಪಾಯಿ ಪಾವತಿಸುತ್ತದೆ. ಒಟ್ಟು 110 ರೂಪಾಯಿ ಪಾವತಿಸಿದಂತಾಗುತ್ತದೆ. ಒಂದು ವರ್ಷದಲ್ಲಿ 1320 ರೂಪಾಯಿ ಪಾವತಿಸಿದಂತಾಗುತ್ತದೆ

ನೀವು 25 ವಯಸ್ಸಿನವರಾಗಿದ್ದರೆ ತಿಂಗಳಿಗೆ 80 ರೂಪಾಯಿ ಪಾವತಿಸಬೇಕು. ಕೇಂದ್ರ ಸರ್ಕಾರವು ತಿಂಗಳಿಗೆ 80 ರೂಪಾಯಿ ಪಾವತಿಸುತ್ತದೆ ಒಟ್ಟು 160 ರೂಪಾಯಿ ಪಾವತಿಸಿದಂತಾಗುತ್ತದೆ. ವರ್ಷಕ್ಕೆ 1920 ರೂಪಾಯಿ ಪಾವತಿಸಿದಂತಾಗುತ್ತದೆ. 40 ವಯಸ್ಸಿನ ರೈತರು ತಿಂಗಳಿಗೆ 200 ರೂಪಾಯಿ ಪಾವತಿಸಿದರೆ ಕೇಂದ್ರ ಸರ್ಕಾರವು ತಿಂಗಳಿಗೆ 200 ರೂಪಾಯಿ ಪಾವತಿಸುತ್ತದೆ. ತಿಂಗಳಿಗೆ ಒಟ್ಟು 400 ರೂಪಾಯಿ ಆಗುತ್ತದೆ. ಅದೇ ವರ್ಷಕ್ಕೆ 4800 ರೂಪಾಯಿ ಪಾವತಿಸಿದಂತಾಗುತ್ತದೆ. ಈ ರೈತರಿಗೆ 60 ವರ್ಷವಾದರೆ ತಿಂಗಳಿಗೆ 3 ಸಾವಿರ ರೂಪಾಯಿ ಪೆನ್ಶನ್ ಸಿಗಲಿದೆ. ಅಂದರೆ ವರ್ಷಕ್ಕೆ 36 ಸಾವಿರ ರೂಪಾಯಿ ಅವರ ಖಾತೆಗೆ ಜಮೆಯಾಗುತ್ತಿರುತ್ತದೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಗಮನಕ್ಕೆ:

ಗ್ರಾಮ ಪಂಚಾಯಿತಿಯ ಚುನಾವಣೆಗಾಗಿ ನೀವು ಮಾಡುವ ಪ್ರಚಾರ ಹಾಗೂ ಪ್ರತಿನಿತ್ಯದ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವುದರಿಂದ ಜನಾಕರ್ಷಣೆ ಆಗುತ್ತದೆ. ಹಾಗೂ ನಿಮ್ಮ ಕಾರ್ಯ ವೈಖರಿ ಜನರಿಗೆ ತಿಳಿದು ಜನ ನಿಮ್ಮನ್ನು ಬೆಂಬಲಿಸಲು ಮುಂದಾಗುತ್ತಾರೆ. ಆದ್ದರಿಂದ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದ ಪೋಸ್ಟರ್ಗಳು ಹಾಗೂ ವಿಡಿಯೋಗಳನ್ನು ನಾವು ಅತ್ಯುತ್ತಮ ಕಡಿಮೆ ದರದಲ್ಲಿ ಮಾಡಿಕೊಡುತ್ತೇವೆ ನಿಮಗೆ ಹಬ್ಬಗಳಿಗೆ ವಿಶೇಷ ಸಂದರ್ಭಗಳಲ್ಲಿ ಅಥವಾ ಹುಟ್ಟುಹಬ್ಬಗಳಲ್ಲಿ ಶುಭಕೋರುವ ಪೋಸ್ಟರ್ಗಳು ಬೇಕಿದ್ದರೆ ಈ ಕೆಳಗೆ ನೀಡಿರುವ ನಂಬರನ್ನು ಸಂಪರ್ಕಿಸಿ. 9845499218

 

ನರೇಗಾ ಯೋಜನೆ ಅಡಿ ಹಲವಾರು ಯೋಜನೆಗಳಿಗೆ ಅರ್ಜಿ ಆಹ್ವಾನ

 

ಮುಂದಿನ 3 ದಿನ ಭಾರಿ ತಾಪಮಾನ ಇಳಿಕೆ, ಇರಲಿದೆ ಚಳಿ ಎಚ್ಚರಿಕೆ!

Leave a Reply

Your email address will not be published. Required fields are marked *