Home » ನಾಳೆ ಭಾರತ್ ಬಂದ್! ಏನಿರುತ್ತೆ? ಏನಿರಲ್ಲಾ?

ನಾಳೆ ಭಾರತ್ ಬಂದ್! ಏನಿರುತ್ತೆ? ಏನಿರಲ್ಲಾ?

ಪ್ರೀಯ ಸಾರ್ವಜನಿಕರೇ ನಿಮಗೊಂದು ಆಶ್ಚರ್ಯಕರ ಸುದ್ದಿ, ಫೆಬ್ರವರಿ 12, 2026 ರಂದು ದೇಶಾದ್ಯಂತ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಹಲವು ರೈತ ಸಂಘಟನೆಗಳು ಸೇರಿ ಈ ಮುಷ್ಕರವನ್ನು ಘೋಷಿಸಿವೆ. ಹೊಸ ಕಾರ್ಮಿಕ ಸಂಹಿತೆಗಳು ಹಾಗೂ ಪ್ರಸ್ತಾವಿತ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಈ ಬಂದ್ ನಡೆಯುತ್ತಿದೆ.

ಮುಷ್ಕರಕ್ಕೆ ಕಾರಣವೇನು?

ಸಂಯುಕ್ತ ಕಿಸಾನ್ ಮೋರ್ಚಾದ(SKM) ಸಂಪೂರ್ಣ ಬೆಂಬಲದೊಂದಿಗೆ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಎನ್‌ಟಿಯುಸಿ), ಆಲ್‌ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ), ಹಿಂದ್ ಮಜ್ದೂರ್ ಸಭಾ (ಎಚ್‌ಎಂಎಸ್), ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ ಸೇರಿದಂತೆ 10 ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.

ಪ್ರಮುಖವಾಗಿ, ಕಳೆದ ವರ್ಷ (2025ರ ನವೆಂಬರ್‌) ಜಾರಿಗೆ ತಂದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಈ ಬಂದ್‌ಗೆ ಕರೆ ನೀಡಲಾಗಿದೆ. ಜತೆಗೆ ಬಿತ್ತನೆ ಬೀಜಗಳ ಮಸೂದೆ–2025, ವಿದ್ಯುತ್ ತಿದ್ದುಪಡಿ ಮಸೂದೆ ಮತ್ತು ಪರಮಾಣು ಶಕ್ತಿಯ ಸುಸ್ಥಿರ ಬಳಕೆ ಹಾಗೂ ಪ್ರಗತಿ ನಿಟ್ಟಿನಲ್ಲಿ ಭಾರತ ಪರಿವರ್ತನೆ (ಶಾಂತಿ) ಮಸೂದೆಯನ್ನು ‌ಹಿಂಪಡೆಯಬೇಕು ಎಂಬ ಬೇಡಿಕೆಗಳು ಸೇರಿವೆ.

ಕಾರ್ಮಿಕ ಸಂಘಗಳ ಪ್ರಮುಖ ಆಕ್ಷೇಪಣೆಗಳು –

INTUC, AITUC, HMS, CITU ಸೇರಿದಂತೆ 10 ಪ್ರಮುಖ ಕೇಂದ್ರ ಕಾರ್ಮಿಕ ಸಂಘಗಳು ಜಂಟಿಯಾಗಿ ಬಂದ್‌ಗೆ ಕರೆ ನೀಡಿದ್ದಾರೆ. ಕಳೆದ ವರ್ಷ ಜಾರಿಗೆ ತಂದ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ಕಡಿಮೆ ಮಾಡುತ್ತವೆ ಎಂದು ಸಂಘಗಳು ಆರೋಪಿಸುತ್ತಿವೆ. ಉದ್ಯೋಗ ಭದ್ರತೆ ಕುಗ್ಗಬಹುದು, ಕೆಲಸದಿಂದ ವಜಾ ಮಾಡುವುದು ಸುಲಭವಾಗಬಹುದು ಎಂಬ ಆತಂಕ ಇದೆ. ವೇತನ ಸಮಸ್ಯೆಗಳು, ಖಾಸಗೀಕರಣ ಮತ್ತು ಸಾಮಾಜಿಕ ಭದ್ರತೆ ಕೊರತೆಯೂ ಅವರ ಪ್ರಮುಖ ಚಿಂತೆಯಾಗಿದೆ.

ರೈತ ಸಂಘಟನೆಗಳ ಬೆಂಬಲ ಮತ್ತು ಬೇಡಿಕೆಗಳು –

ಸಂಯುಕ್ತ ಕಿಸಾನ್ ಮೋರ್ಚಾ (SKM) ಮತ್ತು ಅಖಿಲ ಭಾರತ ಕಿಸಾನ್ ಸಭಾ (AIKS) ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಪ್ರಸ್ತಾವಿತ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಿಂದ ದೇಶೀಯ ರೈತರಿಗೆ ನಷ್ಟವಾಗಬಹುದು ಎಂದು ಅವರು ಹೇಳಿದ್ದಾರೆ. ಡೈರಿ ಉತ್ಪನ್ನಗಳು ಮತ್ತು ಇತರೆ ಕೃಷಿ ವಸ್ತುಗಳಿಗೆ ವಿದೇಶಿ ಸ್ಪರ್ಧೆ ಹೆಚ್ಚಾದರೆ ರೈತರಿಗೆ ಹಾನಿಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕೃಷಿ ಕ್ಷೇತ್ರದ ಭವಿಷ್ಯವನ್ನು ಕಾಪಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *