Home » ಜಮೀನಿಗೆ(ಪಹಣಿಗೆ )ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

ಜಮೀನಿಗೆ(ಪಹಣಿಗೆ )ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

ರೈತರೇ ಮುಖ್ಯವಾಗಿ ಇಲ್ಲಿ ಇವತ್ತು ಹೇಳಬೇಕೆಂದರೆ ರೈತರು ತಮ್ಮ ತಮ್ಮ ಜಮೀನನ್ನು ಬಹಳ ದಿನಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಆದರೆ ರೈತರಿಗೆ ಹೊಸ ತಂತ್ರಜ್ಞಾನ ಬಳಸಿ ಹೇಗೆ ನಮ್ಮ ಜಮೀನಿನ ಸಂಪೂರ್ಣ ಮಾಹಿತಿ ತಿಳಿಯೋಣ.

ಏನಿದು ಭೂಮಿ ಪೋರ್ಟಲ್?

ಹೌದು ಇದು ಒಂದು ರಾಜ್ಯ ಸರ್ಕಾರದ ಕಂದಾಯ ಇಲಾಖೆ ಕಡೆಯಿಂದ ಬಿಡುಗಡೆ ಆದ ವೆಬ್ಸೈಟ್ ಇದೆ. ರೈತರು ಭೂಮಿ( Bhoomi) ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ರೈತರಿಗೆ ತಮ್ಮ ಜಮೀನಿನ ಸಂಪೂರ್ಣ ಮಾಹಿತಿ ಪಡೆಯಲು ಸಹಾಯವಾಗುತ್ತದೆ. ಹಾಗೂ ಅದೇ ರೀತಿ https://landrecords.karnataka.gov.in/. ಈ ಲಿಂಕ್ ಮೂಲಕ ಕೂಡ ಮಾಹಿತಿ ಪಡೆಯಬಹುದು. ರೈತರು ತಮ್ಮ ಜಮೀನಿನ ಸಂಪೂರ್ಣ ಮಾಹಿತಿ ಪಡೆಯಲು ತಮ್ಮ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಲು ಸರ್ವೆ ನಂಬ್ ಹಾಕಿದರೆ ಸಾಕು, ಹಿಸ್ಸಾ ನಂಬರ್ ಸಹಿತ ಯಾವ ರೈತರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಬಹುದು. ಹಾಗೂ ರೈತರಿಗೆ ಇದರಿಂದ ಅವರವರ ಆಸ್ತಿ ಸಂಪೂರ್ಣ ವಿವರ ದೊರೆಯುತ್ತದೆ.

ಆಧಾರ್ ಕಾರ್ಡ್ ಲಿಂಕ್ ಏಕೆ ಮಾಡಬೇಕು?

ಹೌದು ರೈತರೇ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಹಲವಾರು ಲಾಭಗಳು ಇವೆ. ಅದೇ ರೀತಿ ರೈತರಿಗೆ ಸವಲತ್ತುಗಳು ಸಹ ಸಂಪೂರ್ಣ ದೊರೆಯುತ್ತದೆ. ಭೂ ವಂಚನೆ ತಡೆಯುವ ಉದ್ದೇಶದಿಂದ ಈ ನಿಯಮ ಕಡ್ಡಾಯ‌ ರೈತರ ಮಾಹಿತಿ ದಾಖಲಿಸುವ ಜೊತೆಗೆ ಭೂ ಸಂಬಂಧಿತ ವಂಚನೆ ತಡೆಯುವ ಉದ್ದೇಶದಿಂದ ಜಮೀನು ಮಾಲೀಕರ ಫೋಟೋದೊಂದಿಗೆ ಪಹಣಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ. ಕಂದಾಯ ಇಲಾಖೆ ‘ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ’ ಆರಂಭಿಸಿದೆ.

ನಿಮ್ಮ NPCI ಸ್ಥಿತಿಯನ್ನು ಹೀಗೆ ಪರಿಶೀಲಿಸಬಹುದು:

* https://fruits.karnataka.gov.in/ ಗೆ ಭೇಟಿ ನೀಡಿ.
* ಸಿಟಿಜನ್ ರಿಜಿಸ್ಟ್ರೇಷನ್(Citizen Registration ” ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ.
* ಮುಂದುವರಿಯಿರಿ” ಕ್ಲಿಕ್ ಮಾಡಿ.
* ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ನಮೂದಿಸಿ.
* OTP ಯನ್ನು ನಮೂದಿಸಿ ಮತ್ತು “ಸಲ್ಲಿಸಿ” ಕ್ಲಿಕ್ ಮಾಡಿ.
* ಪಾಸ್‌ವರ್ಡ್ ರಚಿಸಿ (Create password) ಮತ್ತು ಲಾಗಿನ್ ಮಾಡಿ.
ಇಷ್ಟು ಮಾಡಿದರೆ ನಿಮ್ಮ ಆರ್.ಟಿ.ಸಿ ಗೆ ಆಧಾರ್ ಲಿಂಕ್ ಆಗಿದೆ ಎಂದು ಖಚಿತ. ಈ ಪ್ರಕ್ರಿಯೆ ಉಚಿತ, ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಮತ್ತು ಪಹಣಿ ಯಲ್ಲಿರುವ ಹೆಸರು ಒಂದೇ ಆಗಿರಬೇಕು.

ಅದೇ ರೀತಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ನಿಮ್ಮ ಹತ್ತಿರ ಒಂದೇ ಪಹನಿಯಲ್ಲಿ ಎಲ್ಲರ ಹೆಸರು ಕೂಡ ಇರುತ್ತದೆ ಸರ್ವೆ ನಂಬರ್ ನಲ್ಲಿರುವ ಹೆಸರು ಪ್ರತ್ಯೇಕವಾಗಿ ಬರಬೇಕೆಂದರೆ ತತ್ಕಾಲ್ ಪೋಡಿಯನ್ನು ಮಾಡಿಸಬಹುದು. ಅದೇ ರೀತಿ ನಿಮ್ಮ ಜಮೀನಿನ ಸುತ್ತ ಇರುವ ಗಡಿಯನ್ನು ನಿರ್ಧರಿಸಿ ಪ್ರತ್ಯೇಕ ಪಹಣಿಗಳನ್ನು ಮಾಡಿಕೊಡುತ್ತದೆ. ಅದಕ್ಕೆ ಉದಾಹರಣೆಯಾಗಿ ಎಂದರೆ ಒಂದು ಸರ್ವೇ ನಂಬರ್ 270 ರಲ್ಲಿ ಇಬ್ಬರು ಜನ ಮಾಲೀಕರಿದ್ದಾರೆ ಎರಡು ಮಾಲೀಕರ ಹೆಸರು ಒಂದೇ ಪಹಣಿ ಪತ್ರಿಕೆಯಲ್ಲಿ ಬರುತ್ತಿರುತ್ತದೆ ಯಾಕಂದ್ರೆ ಒಂದೇ ಸರ್ವೇ ನಂಬರ್ ಆಗಿರುತ್ತದೆ .

ಅದೇ ರೀತಿ ಸರ್ಕಾರವು ಈಗಾಗಲೇ ಅರ್ಹ ರೈತರಿಗೆ ಬರ ಪರಿಹಾರ ತಲುಪಿಸಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಈ ಕುರಿತ ಪಟ್ಟಿಯನ್ನು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಪ್ರಕಟಿಸಲಾಗಿದೆ,” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ವಿಧಾನಸೌಧದಲ್ಲಿ ಭಾನುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, “ರೈತರು ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಲ್ಲಿ ಪಟ್ಟಿ ಪರಿಶೀಲಿಸ ಬಹುದು. ಹೆಸರು ಬಿಟ್ಟು ಹೋಗಿದ್ದರೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕಂದಾಯ ಇಲಾಖೆಯ ಸ್ಥಳೀಯ ಕಚೇರಿಗೆ ಭೇಟಿ ನೀಡಿ ಸೇರ್ಪಡೆ ಮಾಡಿಸಿಕೊಳ್ಳಬೇಕು,” ಎಂದು ಮನವಿ ಮಾಡಿದರು.

ಇದನ್ನು ಬೇರೆ ಮಾಡಿಕೊಳ್ಳಬೇಕೆಂದರೆ ಪೋಡಿ ಮಾಡಿಸಿಕೊಳ್ಳಬೇಕು ಅದನ್ನು ಸರ್ವೇ ನಂಬರ್ 270 ಹಿಸ್ಸಾ ಮತ್ತು ಸರ್ವೆ ನಂಬರ್ 270 ಹಿಸ್ಸಾ 2, ಹೀಗೆ ಪ್ರತ್ಯೇಕವಾಗಿ ಪಹಣಿಯನ್ನು ಪಡೆದುಕೊಳ್ಳಬಹುದು. ಅಂದರೆ ಇಲ್ಲಿ ಸರ್ವೆ ನಂಬರ್ ಒಂದೇ ಆಗಿರುತ್ತದೆ ಆದರೆ ಬೇರೆ ಬೇರೆ ಹಿಸ್ಸಾ ನಂಬರ್ಗಳನ್ನು ಕೊಡಲಾಗುತ್ತದೆ ಇದರಿಂದಾಗಿ ಪ್ರತಿ ಹಿಸ್ಸಾ ನಂಬರ್ ಬೇರೆ ಬೇರೆ ಪಹಣಿಯನ್ನು ತತ್ಕಾಲ್ ಪೋಡಿಯ ಮೂಲಕ ಮಾಡಿಕೊಳ್ಳಬಹುದು. ಅಂದರೆ ಏಕ ಮಾಲೀಕತ್ವದ ಪಹಣಿಯನ್ನು ಪಡೆಯಬಹುದು. ಬಹು ಮಾಲೀಕತ್ವದಿಂದ ಏಕಮಾಲಿತ್ವಕ್ಕೆ ಪರಿವರ್ತನೆ ಮಾಡುವುದನ್ನು ಪೋಡಿ ಅನ್ನಬಹುದು. ನೀವು ನಿಮ್ಮ ಜಮೀನನ್ನು ಹತ್ತು ವರ್ಷದಿಂದ ಅನುಭವಿಸುತ್ತಿದ್ದರೆ ಮಾತ್ರ ಪೋಡಿಗಾಗಿ ಅರ್ಜಿಯನ್ನು ಸಲ್ಲಿಸಬಹುದು.

ಆರ್.ಟಿ.ಸಿ – ಆಧಾರ್ ಲಿಂಕ್ ಮಾಡುವ ಸುಲಭ ವಿಧಾನ –

ನಿಮ್ಮ ಜಮೀನಿನ ಪಹಣಿ (RTC) ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಈಗ ತುಂಬಾ ಸುಲಭ! ಕೆಲವೇ ಕ್ಲಿಕ್ ಗಳಲ್ಲಿ ನೀವು ಈ ಕೆಲಸವನ್ನು ಮನೆಯಿಂದಲೇ ಮಾಡಬಹುದು. 👉
* https://landrecords.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ. ಓಟಿಪಿ ಬೀರುತ್ತದೆ.
• ನಂತರ ಲಾಗಿನ್ ಮೇಲೆ ಕ್ಲಿಕ್ ಮಾಡಿ.
• ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಕಬೇಕು. ನಂತರ ಅಲ್ಲಿ ಆಧಾರ್ ಕಾರ್ಡ್ ಅಲ್ಲಿ ಇರುವ ಹೆಸರನ್ನು ತಪ್ಪದೇ ನಿಖರವಾಗಿ ಹಾಕಬೇಕು.
• ನಂತರ ಅಲ್ಲಿ ನಿಮ್ಮ ಜಮೀನಿನ ಸರ್ವೇ ನಂಬರ್ ಹಾಕಿ ಹಿಸ್ಸಾ ನಂಬರ್ ಹಾಕಿ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಲಿಂಕ್ ಆಗುತ್ತದೆ.

ತತ್ಕಾಲ್ ಪೋಡಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನೇನು ಬೇಕು ಎಂಬುದನ್ನು ತಿಳಿಯೋಣ.

• ಜಮೀನಿನ ಮಾಲೀಕನ ಆಧಾರ್ ಕಾರ್ಡ್.
• ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಪೋಡಿ ಮಾಡಿಸುವ ಅರ್ಜಿಯನ್ನು ತುಂಬಬೇಕು.
• ಇದಕ್ಕಿಂತ ಹೆಚ್ಚಿನ ದಾಖಲೆಗಳು ಬೇಕಾಗಿದ್ದಲ್ಲಿ ನೀವು ನಾಡಕಚೇರಿ ಅಥವಾ ತಾಲೂಕು ಆಫೀಸ್ ಸರ್ವೆ ಡಿಪಾರ್ಟೆಂಟ್ನಲ್ಲಿ ವಿಚಾರಿಸಿ ಪೋಡಿ ಅರ್ಜಿ ಕೂಡ ನಾಡಕಚೇರಿಯಲ್ಲಿ ಸಿಗುತ್ತದೆ. ಅದೇ ರೀತಿ ನೀವು ಪೋಡಿಗೆ ಅರ್ಜಿಯನ್ನು ನಾಡಕಚೇರಿಯಲ್ಲಿ ಸಲ್ಲಿಸಬೇಕಾಗುತ್ತದೆ ಅಥವಾ ತಹಶೀಲ್ದಾರರಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ತತ್ಕಾಲ್ ಪೋಡಿಯಲ್ಲಿ ನಿಮ್ಮ ಹೆಸರು ಬದಲಾಗುವುದಿಲ್ಲ ನಿಮ್ಮ ಗಡಿಯನ್ನು ಗುರುತಿಸಿ ಆರ್ ಟಿ ಸಿ ಯಲ್ಲಿ ನಿಮ್ಮ ಹೆಸರನ್ನು ಪ್ರತ್ಯೇಕವಾಗಿ ಕೊಡಲಾಗುತ್ತದೆ. ಬಹುಮಾಲಿಕತ್ವದಿಂದ ಏಕಮಾಲಿಕತ್ವಕ್ಕೆ ಬದಲಾಯಿಸಿಕೊಡುತ್ತಾರೆ.

Leave a Reply

Your email address will not be published. Required fields are marked *