ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾದಂತೆ ಅವರು ಆರೋಗ್ಯಯುತ ಆಹಾರದ ಹುಡುಕಾಟದಲ್ಲಿ ತೊಡಗಿದ್ದಾರೆ. ರಾಸಾಯನಿಕ ಮಿಶ್ರಿತ ವಿಷಕಾರಿ ಆಹಾರವನ್ನು ಸೇವಿಸಿ, ಆಸ್ಪತ್ರೆಗಳಿಗೆ ಹಣ ಸುರಿದು ಸಾಕಾಗಿರುವ ಮಂದಿ, ಈಗ ರಾಸಾಯನಿಕಗಳ ಸಹವಾಸವೇ ಇರದ ಸಾವಯವ ಉತ್ಪನ್ನಗಳ ಬಗ್ಗೆ ಆಸಕ್ತಿ ತಳೆದಿದ್ದಾರೆ. ಸಾವಯವ ಪೋಟ್ಯಾಷ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು, ಇದು ಸಸ್ಯಗಳ ಬೆಳವಣಿಗೆಗೆ (ಹೂವು-ಹಣ್ಣು) ಪೋಷಕಾಂಶಗಳನ್ನು ಒದಗಿಸುತ್ತದೆ.
ಮುಖ್ಯವಾಗಿ ಬಾಳೆಹಣ್ಣಿನ ಸಿಪ್ಪೆಗಳನ್ನು ಒಣಗಿಸಿ ಪುಡಿ ಮಾಡುವುದು ಅಥವಾ ಮರದ ಬೂದಿಯನ್ನು ನೀರಿನಲ್ಲಿ ನೆನೆಸಿ ದ್ರವ ಗೊಬ್ಬರ ತಯಾರಿಸುವುದು ಅತ್ಯಂತ ಪರಿಣಾಮಕಾರಿ ವಿಧಾನಗಳಾಗಿವೆ. ಇವು ಮಣ್ಣಿನಲ್ಲಿ ಪೊಟ್ಯಾಸಿಯಮ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ಸಾವಯವ ಕೃಷಿ ಎಂದರೆ ರಾಸಾಯನಿಕಗಳನ್ನು ಬಳಸದೆೇ ನೆೈಸರ್ಗಿಕ ವಿಧಾನಗಳಿಂದ ಕೃಷಿ ಮಾಡನವ ಪ್ರಕ್ರರಯೆ. ಇದನ್ನು ಪರಿಸರ ಸ್ನೇಹಿ ಕೃಷಿ ವಿಧಾನವಾಗಿದೆ. ಮಣ್ಣಿನ ಆರೋಗ್ಯ ಮತ್ತು ಪೋಷಕಾಂಶಗಳನ್ನು
ಕಾಪಾಡುತ್ತದೆ.
ಸಾವಯವ ಪೋಟ್ಯಾಷ್ ತಯಾರಿಸುವ ವಿಧಾನಗಳು:
- ಬಾಳೆಹಣ್ಣಿನ ಸಿಪ್ಪೆಯ ಗೊಬ್ಬರ: ಬಾಳೆಹಣ್ಣಿನ ಸಿಪ್ಪೆಗಳನ್ನು ಸಣ್ಣದಾಗಿ ಕತ್ತರಿಸಿ, 1-2 ದಿನ ಬಿಸಿಲಿನಲ್ಲಿ ಒಣಗಿಸಿ. ನಂತರ ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ಈ ಪುಡಿಯನ್ನು ನೇರವಾಗಿ ಸಸ್ಯಗಳ ಬೇರಿನ ಸುತ್ತ ಮಣ್ಣಿಗೆ ಸೇರಿಸಬಹುದು.
- ಮರದ ಬೂದಿಯ ದ್ರವ: 1 ಕೆಜಿ ಮರದ ಬೂದಿಯನ್ನು 10 ಲೀಟರ್ ನೀರಿನಲ್ಲಿ ಬೆರೆಸಿ, 24 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ, ತಿಳಿ ದ್ರವವನ್ನು ಸೋಸಿ ಸಸ್ಯಗಳಿಗೆ ನೀರಾವರಿ ಗೊಬ್ಬರವಾಗಿ ಬಳಸಬಹುದು. ಇದು ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅನ್ನು ಒದಗಿಸುತ್ತದೆ.
- ಪೊಟ್ಯಾಶ್ ಮಿಶ್ರಣ (Banana-Eggshell-Epsom Salt): ಒಣಗಿದ ಬಾಳೆಹಣ್ಣಿನ ಸಿಪ್ಪೆ, ಒಣಗಿದ ಮೊಟ್ಟೆಯ ಚಿಪ್ಪುಗಳು ಮತ್ತು ಎಪ್ಸಮ್ ಉಪ್ಪನ್ನು ಬೆರೆಸಿ ಪುಡಿಮಾಡಿ. ಈ ಮಿಶ್ರಣವನ್ನು ಗಿಡಗಳ ಬುಡಕ್ಕೆ ಹಾಕುವುದರಿಂದ ಹೆಚ್ಚಿನ ಪೊಟ್ಯಾಸಿಯಮ್ ದೊರೆಯುತ್ತದೆ.
- ಕಾಕಂಬಿ ಅಥವಾ ಸಾವಯವ ತ್ಯಾಜ್ಯದಿಂದ: ಕಬ್ಬಿನ ಕಾಕಂಬಿ (Molasses) ಅಥವಾ ತರಕಾರಿ ತ್ಯಾಜ್ಯಗಳನ್ನು ಕೊಳೆಸಿ ಸಹ ಸಾವಯವ ಪೊಟ್ಯಾಶ್ ಅನ್ನು ತಯಾರಿಸಬಹುದು, ಇದು ದ್ಯುತಿಸಂಶ್ಲೇಷಣೆಯನ್ನು ಸುಧಾರಿಸುತ್ತದೆ.
ನೈಸರ್ಗಿಕ ಸಂಪನ್ಮೂಲಗಳ ಬಳಕೆ –
ನೈಸರ್ಗಿಕ ಸಂಪನ್ಮೂಲಗಳನ್ನು ಮಾತ್ರ ಬಳಸುವುದನ್ನು ಸಾವಯವ ಕೃಷಿ ಪ್ರೋತ್ಸಾಹಿಸುತ್ತದೆ. ಇಲ್ಲಿ ಸಾಧ್ಯವಾದಷ್ಟು ನೂಸರ್ಗಿಕ ವಿಧಾನಗಳ ಮೂಲಕವೇ ಕೃಷಿ ಮಾಡಬೇಕಾಗುತ್ತದೆ. ಉಳುಮೆಗೆ ಎತ್ತುಗಳು, ಮರದ ನೇಗಿಲು ಬಳಸುವುದು, ಬಿತ್ತನೆ ನಂತರ ಪದೇ ಪದೆ ಭೂಮಿಯನ್ನು ಉಳುಮೆ ಮಾಡದೆ, ಬೆಳೆದ ಕಳೆಯನ್ನು ಕತ್ತಿ, ಕುಡುಗೋಲು ಮತ್ತಿತರ ಸಾಧನಗಳಿಂದ ಕತ್ತರಿಸುವುದು ಸಾವಯವ ಕೃಷಿಯ ಭಾಗವಾಗಬೇಕು. ಟ್ರ್ಯಾಕ್ಟರ್ ಮತ್ತಿತರ ಯಂತ್ರೋಪಕರಣಗಳ ಬಳಕೆಯನ್ನು ಸಾಧ್ಯವಾದಷ್ಟು ನಿಲ್ಲಿಸಬೇಕು.
