Home » ಪಂಚಗವ್ಯ ರೈತನ ಶಕ್ತಿ! ಆಧುನಿಕ ಕೃಷಿಯಲ್ಲಿ ಇದರ ಪಾತ್ರ!

ಪಂಚಗವ್ಯ ರೈತನ ಶಕ್ತಿ! ಆಧುನಿಕ ಕೃಷಿಯಲ್ಲಿ ಇದರ ಪಾತ್ರ!

ಪ್ರೀಯ ರೈತರೇ ಇವತ್ತು ಸಾವಯವ ದ್ರಾವಣದ ಬಗ್ಗೆ ನಿಮಗೆ ಮಾಹಿತಿ ನೀಡುತ್ತೇನೆ. ಏನಿದು ಪಂಚಗವ್ಯ? ಏನು ಇದರ ಕೆಲಸ? ಯಾವ ಬೆಳೆಗಳಿಗೆ ಸೂಕ್ತ? ಯಾವಾಗ ಬಳಸಬೇಕು? ಇದೆಲ್ಲದರ ಸಂಪೂರ್ಣ ಮಾಹಿತಿ ನೀಡುತ್ತೇನೆ.

ಪಂಚಗವ್ಯ ತಯಾರಿಸುವ ವಿಧಾನ (20 ಲೀಟರ್‌ಗೆ):

ಅಗತ್ಯವಿರುವ ಪದಾರ್ಥಗಳು:

  • ತಾಜಾ ನಾಟಿ ಹಸುವಿನ ಸಗಣಿ: 5 ಕೆ.ಜಿ
  • ಹಸುವಿನ ತುಪ್ಪ: 1 ಕೆ.ಜಿ
  • ಗೋಮೂತ್ರ: 3 ಲೀಟರ್
  • ಹಸುವಿನ ಹಾಲು: 2 ಲೀಟರ್
  • ಹಸುವಿನ ಮೊಸರು: 2 ಲೀಟರ್
  • ಮಾಗಿದ ಬಾಳೆಹಣ್ಣು: 1 ಡಜನ್
  • ತೆಂಗಿನ ನೀರು: 3 ಲೀಟರ್
  • ಬೆಲ್ಲ: 1 ಕೆ.ಜಿ (ಅಥವಾ 0.5 ಕೆಜಿ)

ಪಂಚಗವ್ಯ ತಯಾರಿ ಹಂತಗಳು –

  • ಮೊದಲ 3 ದಿನಗಳು: ಒಂದು ಪ್ಲಾಸ್ಟಿಕ್ ಡ್ರಮ್‌ನಲ್ಲಿ 5 ಕೆಜಿ ಸಗಣಿ ಮತ್ತು 1 ಕೆಜಿ ತುಪ್ಪವನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 3 ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕಲಕಬೇಕು.
  • 4ನೇ ದಿನ: ಉಳಿದ ಪದಾರ್ಥಗಳಾದ ಗೋಮೂತ್ರ, ಹಾಲು, ಮೊಸರು, ಮಾಗಿದ ಬಾಳೆಹಣ್ಣು, ತೆಂಗಿನ ನೀರು ಮತ್ತು ಬೆಲ್ಲವನ್ನು ಆ ಮಿಶ್ರಣಕ್ಕೆ ಸೇರಿಸಿ.
  • ಹುದುಗುವಿಕೆ: ಈ ಮಿಶ್ರಣವನ್ನು 15 ರಿಂದ 20 ದಿನಗಳವರೆಗೆ ನೆರಳಿನಲ್ಲಿ ಇರಿಸಿ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಮರದ ಕೋಲಿನಿಂದ ಮಿಶ್ರಣವನ್ನು ಪ್ರದಕ್ಷಿಣಾಕಾರವಾಗಿ (Clockwise) ತಿರುಗಿಸಬೇಕು.

ಪಂಚಗವ್ಯ ಬಳಕೆ:
* 20-30 ದಿನಗಳ ನಂತರ, ಪಂಚಗವ್ಯವು ಸುವಾಸನೆಯಿಂದ ಕೂಡಿ ಬಳಸಲು ಸಿದ್ಧವಾಗುತ್ತದೆ.
* ಪ್ರತಿ ಪಂಪಿಂಗೆ 80-100 ಮೀಲಿ ಹಾಕಿ ಸ್ಪ್ರೇ ಮಾಡಬೇಕು.
* ಅಥವಾ ನೀರಿನಲ್ಲಿ ಸಹ ಬಿಡಬಹುದು.

ಬೆಳೆ ಸಿಂಪರಣಾ ಸಮಯ –

* ಭತ್ತ 10, 15, 30 ಮತ್ತು 50 ದಿನಗಳು ಬಿತ್ತನೆ ಮಾಡಿದ ನಂತರ.
* ಉದ್ದಿನಕಾಳು 15,25 ಮತ್ತು 40 ದಿನಗಳು ಬಿತ್ತನೆ ಮಾಡಿದ ನಂತರ.
* ಹೆಸರುಕಾಳು 15, 25, 45 ಮತ್ತು 50 ದಿನಗಳು ಬಿತ್ತನೆ ಮಾಡಿದ ನಂತರ.
* ಕಬ್ಬಿಗೆ ಪ್ರತಿ ತಿಂಗಳಿಗೊಮ್ಮೆ ಡ್ರಿಪ್ ಮೂಲಕ ಬಿಡುವುದು.
* ಪಂಚಗವ್ಯವನ್ನು ಬೆಳೆಗಳ ಮೇಲೆ ಸಿಂಪರಣೆ ಮಾಡುವುದರ ಜೊತೆಗೆ ಬೀಜೋಪಚಾರ ಮಾಡಲು ಸಹ ಬೆಳೆಸಬಹುದು.

Leave a Reply

Your email address will not be published. Required fields are marked *