Home » ಇವತ್ತಿನಿಂದ ಆಸ್ತಿ ನೊಂದಣಿಗೆ 4 ಹೊಸ ನಿಯಮಗಳು ಜಾರಿ.

ಇವತ್ತಿನಿಂದ ಆಸ್ತಿ ನೊಂದಣಿಗೆ 4 ಹೊಸ ನಿಯಮಗಳು ಜಾರಿ.

ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ಸುದ್ದಿ ಕೊಡುತ್ತೇನೆ. ಕರ್ನಾಟಕದಲ್ಲಿ ಆಸ್ತಿ ನೋಂದಣಿಗೆ 2025ರ ಹೊಸ ನಿಯಮಗಳ ಅಡಿಯಲ್ಲಿ, ನಕಲಿ ನೋಂದಣಿ ತಡೆಯಲು ಹಾಗೂ ಪಾರದರ್ಶಕತೆಗಾಗಿ ಮಹತ್ವದ ಬದಲಾವಣೆಗಳನ್ನು ತರಲಾಗಿದೆ. 30 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ವಹಿವಾಟಿಗೆ ಪ್ಯಾನ್ (PAN) ಕಾರ್ಡ್ ಕಡ್ಡಾಯ, ಆಧಾರ್ ಲಿಂಕ್, ಆನ್‌ಲೈನ್ ನೋಂದಣಿ ಕಡ್ಡಾಯ ಮತ್ತು ಜಿಪಿಎ (GPA) ಬಳಕೆಯ ಮೇಲಿನ ನಿರ್ಬಂಧಗಳು ಪ್ರಮುಖವಾಗಿವೆ.

ಪ್ರಮುಖ 4 ಬದಲಾವಣೆಗಳು:

  1. ಮನೆಯಲ್ಲೇ ಕುಳಿತು ಅರ್ಜಿ: ಇನ್ಮುಂದೆ ನೀವು ಉಪ ನೋಂದಣಾಧಿಕಾರಿ ಕಚೇರಿಗೆ ಪದೇ ಪದೇ ಹೋಗುವ ಅಗತ್ಯವಿಲ್ಲ. ಅಗತ್ಯ ದಾಖಲೆಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬಹುದು.
  2. OTP ಕಡ್ಡಾಯ: ವಂಚನೆ ತಡೆಯಲು, ನೋಂದಣಿ
  3. ಸಮಯದಲ್ಲಿ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP (One Time Password) ಹೇಳುವುದು ಕಡ್ಡಾಯವಾಗಿದೆ.
  4. ವಿಡಿಯೋ ಸಾಕ್ಷಿ: ಭವಿಷ್ಯದಲ್ಲಿ ಆಸ್ತಿಯ ಬಗ್ಗೆ
  5. ತಕರಾರು ಬಾರದಂತೆ ತಡೆಯಲು, ನೋಂದಣಿ ನಡೆಯುವಾಗ ಇಡೀ ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಣ ಮಾಡಲಾಗುತ್ತದೆ.
  6. ಡಜಿಟಲ್ ಸಹಿ: ಹಳೆಯ ಕಾಗದ ಪತ್ರಗಳಿಗೆ ಬ್ರೇಕ್
  7. ಹಾಕಲಾಗಿದ್ದು, ಅಧಿಕಾರಿಗಳು ಡಿಜಿಟಲ್ ಸಹಿ ಮೂಲಕ ಕ್ಷಣಾರ್ಧದಲ್ಲಿ ಅರ್ಜಿ ವಿಲೇವಾರಿ ಮಾಡಲಿದ್ದಾರೆ.

ಬೇಕಾಗುವ ದಾಖಲೆಗಳು (Documents Required):

  • ಆಧಾರ್ ಮತ್ತು ಪ್ಯಾನ್ ಕಾರ್ಡ್
  • ಇ-ಸ್ವತ್ತು / ಇ-ಖಾತಾ (ಗ್ರಾಮಠಾಣಾ ಜಾಗಕ್ಕೆ
  • ಮ್ಯುಟೇಷನ್ ಪ್ರತಿ
  • ಋಣಭಾರ ಪ್ರಮಾಣ ಪತ್ರ (EC)
  • ಆಧಾರ್ ಕಾರ್ಡ್ ಲಿಂಕ್ ಇರುವ ಬ್ಯಾಂಕ್ ಖಾತೆ.
ಆಸ್ತಿ ಖರೀದಿಗಾರರನ್ನು ವಂಚನೆಗಳಿಂದ ರಕ್ಷಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು ನೋಂದಣಿ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ತರಲು ಮುಂದಾಗಿದೆ. ನಕಲಿ ಅಥವಾ ಕಾನೂನುಬಾಹಿರ ದಾಖಲೆಗಳನ್ನು ಬಳಸಿ ನೋಂದಾಯಿಸಲಾದ ಆಸ್ತಿ ನೋಂದಣಿಗಳನ್ನು ರದ್ದುಪಡಿಸಲು ಜಿಲ್ಲಾ ನೋಂದಣಾಧಿಕಾರಿಗಳಿಗೆ ಅಧಿಕಾರ ನೀಡುವ ಕರಡು ನಿಯಮಗಳನ್ನು ಸರ್ಕಾರ ಹೊರಡಿಸಿದೆ. ಈ ಅಧಿಕಾರವನ್ನು ಬಳಸಲು ಈ ಹಿಂದೆ ನ್ಯಾಯಾಲಯದ ಹಸ್ತಕ್ಷೇಪದ ಅಗತ್ಯವಿತ್ತು. ಹೊಸ ನಿಯಮಗಳು ಉಪ-ನೋಂದಣಾಧಿಕಾರಿಗಳು ಸಹ ದಾಖಲೆಗಳು ನಕಲಿಯೆಂದು ಕಂಡುಬಂದಲ್ಲಿ ನೋಂದಣಿಯನ್ನು ನಿರಾಕರಿಸಲು ಅನುವು ಮಾಡಿಕೊಡುತ್ತವೆ. ಇದು ರಾಜ್ಯದ ನೋಂದಣಿ ಚೌಕಟ್ಟಿನಲ್ಲಿ ಗಮನಾರ್ಹ ಬದಲಾವಣೆಯಾಗಿದೆ.
ಕರ್ನಾಟಕ ನೋಂದಣಿ ನಿಯಮಗಳು 2025 ಪ್ರಕಟ
ಕರ್ನಾಟಕ ನೋಂದಣಿ (ನೋಂದಾಯಿತ ದಾಖಲೆಗಳ ನಿರಾಕರಣೆ ಮತ್ತು ರದ್ದತಿ) ನಿಯಮಗಳು 2025′ ರ ಕರಡನ್ನು ಸರ್ಕಾರವು ಬಿಡುಗಡೆ ಮಾಡಿದ್ದು, ಅವುಗಳನ್ನು ಅಂತಿಮಗೊಳಿಸುವ ಮೊದಲು ಸಾರ್ವಜನಿಕರಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿದೆ. ದಾಖಲೆ ನೋಂದಣಿ ವ್ಯವಸ್ಥೆಯ ದುರ್ಬಳಕೆಗೆ ಅವಕಾಶ ನೀಡಿದ್ದ ದೀರ್ಘಕಾಲದ ಲೋಪದೋಷಗಳನ್ನು ನಿವಾರಿಸುವುದು ಈ ಕ್ರಮದ ಉದ್ದೇಶವಾಗಿದೆ.

Leave a Reply

Your email address will not be published. Required fields are marked *