Home » ಕೇಂದ್ರದ ಬಜೆಟ್ ನಲ್ಲಿ ಕೃಷಿಗೆ ಯೋಜನೆಗಳ ಪಟ್ಟಿ ಬಿಡುಗಡೆ.

ಕೇಂದ್ರದ ಬಜೆಟ್ ನಲ್ಲಿ ಕೃಷಿಗೆ ಯೋಜನೆಗಳ ಪಟ್ಟಿ ಬಿಡುಗಡೆ.

ಪ್ರೀಯ ರೈತರೇ ಇವತ್ತು ನಾವು ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಮಾಹಿತಿ ನೀಡುತ್ತೇನೆ. ಈ ಕೇಂದ್ರದ ಬಜೆಟ್ ಅಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ನೀಡಲಾಗುತ್ತಿರುವ ಕಂತಿನ ಹಣ ಎರಡು ಪಟ್ಟು ಹೆಚ್ಚಿಸಬಹುದು ಎಂದು ರೈತರು ನಿರೀಕ್ಷೆಯಲ್ಲಿದ್ದಾರೆ. ಸದ್ಯ ಈ ಸ್ಕೀಮ್ ಅಡಿ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6,000 ರೂ ನೀಡಲಾಗುತ್ತಿದೆ. ಒಂದು ಕಂತಿನಲ್ಲಿ ನೀಡಲಾಗುವ 2,000 ರೂ ಅನ್ನು 4,000 ರೂಗೆ ಹೆಚ್ಚಿಸಬಹುದಾ? ಎಂದು ಹಲವಾರು ಪ್ರಶ್ನೆಗಳು ಕಾಡುತ್ತಿವೆ ಬನ್ನಿ ಹೇಗೆ ಸರ್ಕಾರವು ನೀರಿಕ್ಷೆಗಳನ್ನು ತಯಾರಿಸಿದೆ ಎಂದು ನೋಡೋಣ.

ರೈತರ ನಿರೀಕ್ಷೆಗಳು: ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ (ರಿ) ಫೆಬ್ರವರಿ 1ರಂದು ಮಂಡನೆ ಮಾಡುವ ಕೇಂದ್ರ ಬಜೆಟ್ ನಿರೀಕ್ಷೆಗಳು ಏನು? ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಈ ಕುರಿತು ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರಕಟಣೆ ಹೊರಡಿಸಿದ್ದಾರೆ.

  • ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಖರೀದಿ ಕಾಯ್ದೆ ಜಾರಿಗೆ ಬರಬೇಕು.
  • ಕೃಷಿ ಸಾಲ ಬಡ್ಡಿ ರಹಿತ 5 ಲಕ್ಷ ಯೋಜನೆ ಜಾರಿಗೆ ತರಬೇಕು.
  • ಕಿಸಾನ್ ಸಮ್ಮಾನ್ ಯೋಜನೆ 10,000ಕ್ಕೆ ಏರಿಸಬೇಕು.
  • ಕಬ್ಬಿನ ಎಫ್.ಆರ್.ಪಿ. ದರ ರೈತರ ಹೊಲದಲ್ಲಿನ ದರ ಎಂದು ನಿಗದಿಯಾಗಬೇಕು.
  • ಅತಿವೃಷ್ಟಿ ಮಳೆ ಹಾನಿ ಪರಿಹಾರ. ಎನ್.ಡಿ.ಆರ್.ಎಫ್. ಮಾನದಂಡ ವೈಜ್ಞಾನಿಕವಾಗಿ ಬದಲಾಗಬೇಕು.
  • ಕೃಷಿ ಸಾಲ ನೀತಿ ಬದಲಾಗಬೇಕು ಕೃಷಿ ಭೂಮಿ ಮೌಲ್ಯಕ್ಕೆ 75ರಷ್ಟು ಸಾಲ ನೀಡುವ ಯೋಜನೆ ಜಾರಿಗೆ ಬರಬೇಕು
  • ರೈತರ ಕೃಷಿ ಸಾಲ ವಸುಲಾತಿಗಾಗಿ ಜಮೀನು ಮುಟ್ಟುಗೋಲು ಹಾಕಿ ಹರಾಜು ಹಾಕುವ ಸರ್ಪೈಸಿ ಕಾಯ್ದೆ ರದ್ದು ಮಾಡಬೇಕು

ಈ ಮೇಲ್ಕಂಡ ಒತ್ತಾಯಗಳ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಜಾರಿಗೆ ತರಬೇಕು ಎಂದು ರಾಜ್ಯದ ರೈತರ ಪರವಾಗಿ ಒತ್ತಾಯಿಸುತ್ತೇವೆ ಎಂದು ಪ್ರಕಟಣೆ ತಿಳಿಸಿದೆ.

ಬಜೆಟ್ಗೆ ಮುಂಚೆ ಸಿಗುತ್ತಾ ಪಿಎಂ ಕಿಸಾನ್ ಹಣ?

2019ರಲ್ಲಿ ಶುರುವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಇಲ್ಲಿಯವರೆಗೆ 21 ಕಂತುಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. 21ನೇ ಕಂತಿನ ಹಣ ನವೆಂಬರ್ನಲ್ಲಿ ಬಿಡುಗಡೆ ಆಗಿದ್ದರೂ, 22ನೇ ಕಂತಿನ ಹಣ ಈ ತಿಂಗಳೇ ಸಿಗಬಹುದು ಎನ್ನಲಾಗುತ್ತಿದೆ. ಬಜೆಟ್ಗೆ ಮುಂಚೆ ಸರ್ಕಾರ ಹಣ ಬಿಡುಗಡೆ ಮಾಡಬಹುದು ಎನ್ನುವ ಸುದ್ದಿಗಳು ಕೇಳಿಬರುತ್ತಿವೆ.

Leave a Reply

Your email address will not be published. Required fields are marked *