ಜಸ್ಟ್ 200 ರೂ Driving Licence : ಬೈಕ್, ಕಾರು, ಲಾರಿ ಯಾವುದೇ ಇರಲಿ ಡ್ರೈವಿಂಗ್ ಲೈಸೆನ್ಸ್ (Driving Licence) ಹೇಗೆ ಅಗತ್ಯವೋ, ಅದೇ ರೀತಿ ವಾಹನ ನೋಂದಣಿ ಪ್ರಮಾಣಪತ್ರ (RC) ಕಡ್ಡಾಯವಾಗಿ ಇರಲೇಬೇಕು. ಇದನ್ನು ಆರ್‌ಟಿಒ ಅಧಿಕೃತವಾಗಿ ವಿತರಣೆ ಮಾಡುತ್ತದೆ. ಇದೀಗ ಡಿಎಲ್ ಮತ್ತು ಆರ್‌ಸಿ ಸಂಬಂಧಿಸಿ ಸಾರಿಗೆ ಇಲಾಖೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಾರಿಗೆ ಇಲಾಖೆ ಹೊಸ ಸ್ಮಾರ್ಟ್ ಕಾರ್ಡ್‌ಗಳನ್ನು (DL-RC Smart Card) ಬಿಡುಗಡೆ ಮಾಡಿದ್ದರು, ಇದು ಡಿಸೆಂಬರ್ 1 ರಿಂದ ಜಾರಿಗೆ ಬಂದಿದೆ.
ಸಾರಿಗೆ ಇಲಾಖೆಯಿಂದ ಹೊಸ ನಿರ್ಧಾರ!
ಕರ್ನಾಟಕ ಸಾರಿಗೆ ಇಲಾಖೆಯು ಇದೀಗ ವಾಹನ ನೋಂದಣಿ ಪ್ರಮಾಣಪತ್ರ (RC) ಹಾಗೂ ಚಾಲನಾ ಪರವಾನಗಿ (DL) ಗಾಗಿ ಹೊಸ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಡಿಸೆಂಬರ್ 1ರಿಂದಲೇ ಜಾರಿಯಾಗಿರುವ ಈ ನೂತನ ಸ್ಮಾರ್ಟ್ ಕಾರ್ಡ್‌ಗಳು ಮುಂದಿನ 5 ವರ್ಷಗಳ ಕಾಲ ಬಳಕೆಯಲ್ಲಿರಲಿದೆ ಎಂದು ಹೇಳಲಾಗಿದೆ. ದೇಶಾದ್ಯಂತ ಒನ್ ನೇಷನ್, ಒನ್ ಕಾರ್ಡ್ ನೇಷನ್ (One Nation, One Card) ಅಡಿಯಲ್ಲಿ ಸ್ಮಾರ್ಟ್ ಕಾರ್ಡ್ ಮಾದರಿಗಳನ್ನು ಕಡ್ಡಾಯಗೊಳಿಸಿದ 2019ರ ಮಾರ್ಚ್ 1ರ ಕೇಂದ್ರ ಸರ್ಕಾರದ ಅಧಿಸೂಚನೆ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.
ಸಾರಿಗೆ ಸಚಿವರು ಹೇಳಿದ್ದೇನು?
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದಂತೆ, “ಹೊಸ ಕಾರ್ಡ್‌ಗಳನ್ನು ಬಾಳಿಕೆ ಬರುವ ಪಾಲಿಕಾರ್ಬೊನೇಟ್ ವಸ್ತುವಿನಿಂದ ತಯಾರಿಸಲಾಗಿದೆ ಮತ್ತು ಲೇಸರ್ ಮುದ್ರಣ, 64 KB ಮೈಕ್ರೋಚಿಪ್ ಹಾಗೂ ಎನ್‌ಐಸಿ-ರಚಿತ QR ಕೋಡ್ ಅನ್ನು ಒಳಗೊಂಡಿದೆ. ಇದು ಕಾರ್ಡ್‌ನ ಭದ್ರತೆ ಮತ್ತು ದೃಢೀಕರಣವನ್ನು ಮತ್ತಷ್ಟು ಹೆಚ್ಚಿಸುತ್ತವೆ.”
ಕಾರ್ಡ್‌ಗಳ ಮುದ್ರಣಕ್ಕೆ ಹೊಸ ವ್ಯವಸ್ಥೆ
ಇನ್ನು ಕಾರ್ಡ್‌ಗಳ ಮುದ್ರಣ ಪ್ರಕ್ರಿಯೆಯನ್ನು ವೇಗಗೊಳಿಸಲು ಬೆಂಗಳೂರಿನ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಯಂತ್ರಗಳನ್ನು ಸಹ ಅಳವಡಿಸಲಾಗಿದೆ. ಇಟಲಿಯಿಂದ ಆಮದು ಮಾಡಿದ ಎರಡು S-7000 ಸ್ಮಾರ್ಟ್ ಕಾರ್ಡ್ ಯಂತ್ರಗಳನ್ನು ಇಲ್ಲಿ ಅಳವಡಿಸಲಾಗಿದೆ. ಪ್ರತಿ ಯಂತ್ರವು ಗಂಟೆಗೆ 500-600 ಕಾರ್ಡ್‌ಗಳನ್ನು ಮುದ್ರಿಸುತ್ತದೆ. ಆ ಪ್ರಕಾರ ದಿನಕ್ಕೆ ಒಟ್ಟು 16,000 ಕಾರ್ಡ್‌ಗಳನ್ನು ಉತ್ಪಾದನೆ ಮಾಡುತ್ತದೆ. ಸಾರಿಗೆ ಇಲಾಖೆಯ ಪ್ರಕಾರ, ಇದು ಭಾರತದಲ್ಲೇ ಮೊದಲ ಇಂತಹ ವ್ಯವಸ್ಥೆಯಾಗಿದೆ.
ಹೊಸ ಸ್ಮಾರ್ಟ್ ಕಾರ್ಡ್ ಶುಲ್ಕ:
ಹೊಸ ಡಿಎಲ್-ಆರ್‌ಸಿ ಸ್ಮಾರ್ಟ್ ಕಾರ್ಡ್ ಹೈಟೆಕ್ ಫೀಚರ್ಸ್ ಹೊಂದಿದ್ದು, ಸಾರಿಗೆ ಇಲಾಖೆ ಒಂದು ಕಾರ್‌ಡ್‌ಗೆ 200 ರೂ. ಶುಲ್ಕ ವಿಧಿಸಿದೆ. ಇದರಲ್ಲಿ 135.54 ರೂ. ಸರ್ಕಾರದ ಪಾಲಾದರೆ, ಉಳಿದ 64.46 ಸೇವಾದಾರರಿಗೆ ಸಿಗಲಿದೆ. ಸದ್ಯ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಈ ಕಾರ್ಡ್ ಮುದ್ರಿಸಲಾಗುತ್ತಿದೆ.
ಹಳೆ RC-DL ಕಾರ್ಡ್ ಏನಾಗುತ್ತೆ?
ಅರ್ಜಿ ಸಲ್ಲಿಸಿದವರಿಗೆ ಮಾತ್ರ ಈ ಹೊಸ ಸ್ಮಾರ್ಟ್ ಕಾರ್ಡ್ ಸಿಗಲಿದೆ. ಇನ್ನು ಹೊಸ ಸ್ಮಾರ್ಟ್ ಕಾರ್ಡ್ ಬರುತ್ತಿರುವ ಸುದ್ದಿ ಕೇಳಿ ಬಳಕೆದಾರರಿಗೂ ಹಳೆ ಕಾರ್ಡ್ ಏನಾಗುತ್ತೆ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಹಳೆ ಆರ್‌ಸಿ ಅಥವಾ ಡಿಎಲ್ ಕಾರ್ಡ್ ಎಂದಿನಂತೆ ಚಲಾವಣೆಯಲ್ಲಿರುತ್ತದೆ ಎಂದು ಹೇಳಿದ್ದಾರೆ. ಆದರೆ ಹೊಸ ಕಾರ್ಡ್ ಪಡೆಯಲಿಚ್ಛಿಸುವವರು 200 ರೂ. ಪಾವತಿಸಿ ಪಡೆಯಬಹುದು. ಡಿಸೆಂಬರ್ 15 ರಿಂದ ಹೊಸ ಡಿಎಲ್-ಆರ್‌ಸಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
http://Parivahan.gov.in ಅಥವಾ Transport.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು. ಈ ಮೂಲಕ ಹೊಸ ಸ್ಮಾರ್ಟ್ ಕಾರ್ಡ್ ಪಡೆಯಬಹುದು. ಇನ್ನು ಹತ್ತಿರದ ಆರ್‌ಟಿಒ ಆಫೀಸ್‌ಗೂ ಹೋಗಿ ಫಾರ್ಮ್ ಪಡೆದು ಸಲ್ಲಿಸಬಹುದು.
