Home » Crop Insurance: ರೈತರಿಗೆ ಬೆಳೆ ವಿಮೆ ಮಧ್ಯಂತರ ಪರಿಹಾರ ಯಾವಾಗ

Crop Insurance: ರೈತರಿಗೆ ಬೆಳೆ ವಿಮೆ ಮಧ್ಯಂತರ ಪರಿಹಾರ ಯಾವಾಗ

Crop Insurance : ಪ್ರೀಯ ರೈತರೇ ಇವತ್ತು ನಾವು ಬೆಳೆವಿಮೆ ಬರುವುದು ತಡವಾಗಿದೆ ಏಕೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತೇನೆ. ವಿಮೆ ಕಂಪನಿಯ ನಿಯಮದ ಪ್ರಕಾರ ಹಾನಿ ಸಂಭವಿಸಿದ 72 ಗಂಟೆಗಳೊಳಗೆ ದೂರು ನೀಡಬೇಕಾದರೂ, 1.34 ಲಕ್ಷ ರೈತರು ದೂರವಾಣಿ ಮತ್ತು ಆಫ್‌ಲೈನ್ ಮೂಲಕ ದೂರು ನೀಡಿದ ಬಳಿಕವೂ ಪರಿಹಾರ ಬಿಡುಗಡೆ ತಡವಾಗಿದೆ.

ಜಿಲ್ಲಾಡಳಿತವು ಸರಕಾರಕ್ಕೆ 234 ಕೋಟಿ ರೂ. ಮಧ್ಯಂತರ ಪರಿಹಾರಕ್ಕೆ ಮನವಿ ಸಲ್ಲಿಸಿರುವುದು ತಿಳಿದು ಬಂದಿದೆ. ಪೂರ್ಣ ಪ್ರಮಾಣದ ಪರಿಹಾರ ಸಿಗಲು ಕ್ರಾಪ್ ಕಟಿಂಗ್ ಸರ್ವೇ ನೆರವೇರಬೇಕು, ಆದರೆ ಸರ್ವೇ ವೇಳೆ ಸ್ಥಳ, ಸಮಯ ಮತ್ತು ತೂಕದ ಬಗ್ಗೆ ಗೊಂದಲಗಳು ಮತ್ತು ಅನ್ಯಾಯದ ಆರೋಪಗಳು ಕೇಳಿಬರುತ್ತಿವೆ. ರೈತ ಮುಖಂಡರು ನ್ಯಾಯದ ವಿನಂತಿ ಮಾಡುತ್ತಿದ್ದಾರೆ ಮತ್ತು ಈ ಪ್ರಕ್ರಿಯೆಗೆ ಕನಿಷ್ಠ ಇನ್ನೊಂದು ತಿಂಗಳಷ್ಟು ಸಮಯ ಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಏಕೆ ಬೆಳೆವಿಮೆ ತಡವಾಗಿದೆ?

ಸಾಮಾನ್ಯವಾಗಿ ಸರ್ಕಾರವು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಕೊಡುತ್ತದೆ. ಅದೇ ರೀತಿ ಕೆಲವರು ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ. ಇನ್ನೂ ಕೆಲವರು ಬೆಳೆ ಸಮೀಕ್ಷೆ ಸರಿಯಾಗಿಲ್ಲ. ಅದಕ್ಕಾಗಿ ಸರ್ಕಾರವು ಒಂದು ತುಂಡು ರಚನೆ ಮಾಡಿ ಸರಿಯಾದ ಮಾಹಿತಿ ಕಲೆ ಹಾಕುತ್ತಿದೆ.

ಬೆಳೆವಿಮೆ ಬರುವುದು ತಡವಾಗಿದೆ ಯಾರನ್ನು ಭೇಟಿ ಮಾಡಬೇಕು?

ನಿಮ್ಮ ಊರಿನ ಗ್ರಾಮ ಪಂಚಾಯಿತಿ ಅಥವಾ ನಿಮ್ಮ ಊರಿನ ತಲಾಟಿಯವರನ್ನು ಭೇಟಿ ನೀಡಿ ನಿಮ್ಮ ಬೆಳೆ ಪರಿಹಾರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ. ಏಕೆಂದರೆ ಸರ್ಕಾರವು ಹೆಚ್ಚು ಗಮನ ವಹಿಸಿದೆ. ನೀವು ಸಹ ಅಧಿಕಾರಿಗಳ ಸಂಪರ್ಕ ಇಟ್ಟುಕೊಂಡು ಹಣ ಪಡೆಯಿರಿ.

ಕೃಷಿ ಇಲಾಖೆಯಿಂದ 2025-26ನೇ ಸಾಲಿನಲ್ಲಿ ಜಾರಿಯಲ್ಲಿರುವ ಚಾಲ್ತಿ ಯೋಜನೆಗಳ ಪಟ್ಟಿ ಹೀಗಿದೆ:

  • ಬೀಜಗಳ ಪೂರೈಕೆ.
  • ಕೃಷಿ ಯಾಂತ್ರೀಕರಣ.
  • ಸೂಕ್ಷ್ಮ ನೀರಾವರಿ: ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ.
  • ಕೃಷಿ ಆವರ್ತ ನಿಧಿ.
  • ರೈತರಿಗೆ ನೇರವಾಗಿ ಸಹಕಾರ ಸಂಘಗಳಿಂದ ಸಾಲದ ನೆರವು.
  • ಬೆಳೆ ಸಾಲಕ್ಕೆ ಸಹಾಯಧನ.
  • ಕೃಷಿ ಭಾಗ್ಯ.
  • ಹೈಟೆಕ್ ಹಾರ್ವೆಸ್ಟರ್ ಹಬ್- ಹೈಟೆಕ್ ಹಾರ್ವೆಸ್ಟರ್ ಹಬ್.
  • ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ.
  • ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ ಯೋಜನೆ.

ಶ್ಯೂರಿಟಿ ಇಲ್ಲದೆ 20 ಲಕ್ಷ ಸಾಲ ಸೌಲಭ್ಯ. ಏನಿದು ಯೋಜನೆ?

ರೇಷನ್ ಕಾರ್ಡ್ ಇದ್ದರೆ ಇನ್ಮುಂದೆ ಪ್ರತಿ ತಿಂಗಳು ನಿಮ್ಮ ಖಾತೆಗೆ 1000 ರೂ. ಜಮೆ!

Leave a Reply

Your email address will not be published. Required fields are marked *