Home » ಶ್ಯೂರಿಟಿ ಇಲ್ಲದೆ 20 ಲಕ್ಷ ಸಾಲ ಸೌಲಭ್ಯ. ಏನಿದು ಯೋಜನೆ?

ಶ್ಯೂರಿಟಿ ಇಲ್ಲದೆ 20 ಲಕ್ಷ ಸಾಲ ಸೌಲಭ್ಯ. ಏನಿದು ಯೋಜನೆ?

20 ಲಕ್ಷ ಸಾಲ : ಪ್ರೀಯ ರೈತರೇ ಇವತ್ತು ನಾವು ಒಂದು ಸ್ವಯಂ ಉದ್ಯೋಗ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತೇನೆ. ಈಗಾಗಲೇ ನೀವು ನೋಡುತ್ತಿರುವ ಹಾಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಪ್ರತಿಯೊಂದು ಸಾರ್ವಜನಿಕರಿಗೆ ಸಹಾಯ ಮಾಡುತ್ತಿದೆ. ಸ್ವಯಂ ಉದ್ಯೋಗ ಕೈಗೊಳ್ಳಲು ಕೇಂದ್ರ ಸರ್ಕಾರ ಬಹಳ ಪ್ರಾಮುಖ್ಯತೆ ನೀಡುತ್ತದೆ. ಅದೇ ರೀತಿ ಈಗ ಈ ಯೋಜನೆಯ ಬಗ್ಗೆ ತಿಳಿಯೋಣ ಬನ್ನಿ.

ಈ ಯೋಜನೆಯ ಮುಖ್ಯ ಉದ್ದೇಶ:
ಸಣ್ಣ, ಸೂಕ್ಷ್ಮ ಮತ್ತು ಅಸಂಘಟಿತ ವಲಯದ ಉದ್ಯಮಿಗಳಿಗೆ ಬ್ಯಾಂಕ್‌ಗಳ ಮೂಲಕ ಭದ್ರತೆಯಿಲ್ಲದೇ ಸಾಲ ನೀಡಿ ಸ್ವಯಂ ಉದ್ಯೋಗ ಮತ್ತು ಸಣ್ಣ ಉದ್ಯಮಗಳನ್ನು ಉತ್ತೇಜಿಸುವುದು.

ಈ ಯೋಜನೆ ಮುಖ್ಯ ಅಂಶಗಳು –
2015ರಲ್ಲಿ ಪ್ರಾರಂಭಿಸಲಾಯ್ತು
ಬ್ಯಾಂಕ್‌, ಪ್ರದೇಶೀಯ ಗ್ರಾಮೀಣ ಬ್ಯಾಂಕ್‌, ಸಹಕಾರ ಬ್ಯಾಂಕ್‌, NBFC ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ ಸಾಲ.
ಜಾಮೀನಿಲ್ಲದೆ ಸಾಲ,
ಮಹಿಳೆ/ಯುವಕರಿಗೆ ವಿಶೇಷ ಪ್ರೋತ್ಸಾಹ, ಉತ್ಪಾದನೆ, ವ್ಯಾಪಾರ, ಸೇವಾ ವಲಯಗಳಿಗೆ ಅನ್ವಯ.

ಮುದ್ರಾ ಸಾಲದ ಮೂರು ಹಂತಗಳು –

1️⃣ ಶಿಶು (Shishu)
ಸಾಲ ಮಿತಿಯು: ₹50,000 ವರೆಗೆ
ಆರಂಭಿಕ/ಸಣ್ಣ ವ್ಯವಹಾರಗಳಿಗೆ

2️⃣ ಕಿಶೋರ್ (Kishore)
ಸಾಲ ಮಿತಿ: ₹50,001 ರಿಂದ ₹5 ಲಕ್ಷವರೆಗೆ
ಈಗಾಗಲೇ ನಡೆಯುತ್ತಿರುವ ವ್ಯವಹಾರ ವಿಸ್ತರಣೆಗೆ

3️⃣ ತರುಣ (Tarun)
ಸಾಲ ಮಿತಿ: ₹5 ಲಕ್ಷದಿಂದ ₹10 ಲಕ್ಷವರೆಗೆ ದೊಡ್ಡ ಮಟ್ಟಕ್ಕೆ ವಿಸ್ತರಿಸಲು.

ಯಾರು ಪಡೆಯಬಹುದು?
ಸಣ್ಣ ವ್ಯಾಪಾರಿಗಳು
ಕೃಷಿ ಸಂಬಂಧಿತ ಚಟುವಟಿಕೆಗಳು
ಕಿರು ಉದ್ಯಮಗಳು
ಹಸ್ತಕಲಾವಿದರು
ಸೇವಾ ವಲಯದವರು
ಸ್ಟಾರ್ಟ್‌ಅಪ್ ಪ್ರಾರಂಭಿಸಲು ಬಯಸುವವರು

ಅರ್ಜಿ ಹೇಗೆ ಸಲ್ಲಿಸಬೇಕು?
ಹತ್ತಿರದ ಬ್ಯಾಂಕ್/ಗ್ರಾಮೀಣ ಬ್ಯಾಂಕ್/NBFC ಗೆ ಭೇಟಿ
ವ್ಯವಹಾರ ಯೋಜನೆ (project report)
ಗುರುತಿನ ಚೀಟಿ (Aadhaar/PAN)
ವಿಳಾಸದ ಸಾಕ್ಷ್ಯ
ಫೋಟೋ
ಅಗತ್ಯವಾದಲ್ಲಿ ಬ್ಯಾಂಕ್ ಖಾತೆ ವಿವರಗಳು.

Leave a Reply

Your email address will not be published. Required fields are marked *