ರೇಷನ್ ಕಾರ್ಡ್‌ಗಳು ರದ್ದು : ರಾಜ್ಯದಲ್ಲಿ ಅನರ್ಹರು ಹೊಂದಿದ್ದ 2.43 ಲಕ್ಷ ಪಡಿತರ ಚೀಟಿಗಳನ್ನು (Ration Cards) ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ತಿಳಿಸಿದೆ. ಈ ಕ್ರಮವನ್ನು ತಂತ್ರಜ್ಞಾನ ಮತ್ತು ಆಧಾರ್ ಲಿಂಕ್ ಪರಿಶೀಲನೆ ಮೂಲಕ ಕೈಗೊಳ್ಳಲಾಗಿದೆ. ಈ ಕೆಳಗಿನ ಕಾರಣಗಳಿಂದ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ ಎಂದು ರಾಜ್ಯದ ಆಹಾರ ಸಚಿವರು ಲೋಕಸಭೆಯಲ್ಲಿ ತಿಳಿಸಿದ್ದಾರೆ. ಆಧಾರ್ ಲಿಂಕ್ ಆಗದಿರುವುದು, ನಿಗದಿತ ಸಮಯದಲ್ಲಿ ಇ-ಕೆವೈಸಿ ಮಾಡಿಸದ ಕಾರ್ಡ್‌ಗಳು ಡಿಲೀಟ್. ರೇಷನ್ ಕಾರ್ಡ್ ರದ್ದು ಮಾಡಿರೋದು ರಾಜ್ಯ ಸರ್ಕಾರವಲ್ಲ, ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ನೆನಪಿದ್ಯೋ ಇಲ್ಲವೋ ಗೊತ್ತಿಲ್ಲ ಮೊದಲು ರೇಷನ್ ಕಾರ್ಡ್ ಗೆ ಆಧಾರ್ ಸಂಖ್ಯೆ, ಆ ಬಳಿಕ ಆಧಾರ್ ಗೆ ಪ್ಯಾನ್ ನಂಬರ್ ಕೂಡ ಲಿಂಕ್ ಮಾಡಲು ಕೇಂದ್ರ ಸರ್ಕಾರ ಸೂಚಿಸಿತ್ತು. ಅದರಂತೆ ಎಲ್ಲರೂ ರೇಷನ್ ಕಾರ್ಡ್ ಗೆ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲಾಗಿತ್ತು. ಇ-ಕೆವೈಸಿ ಮೂಲಕ ಒಪ್ಪಿಗೆಯನ್ನೂ ಸೂಚಿಸಲಾಗಿತ್ತು.
ಕೇಂದ್ರ ಸರ್ಕಾರದ ಸೂಚನೆ
ಕೇಂದ್ರ ಸರ್ಕಾರದ ಸೂಚನೆಯಂತೆ ಈ ರೀತಿಯಾಗಿ ಇ-ಕೆವೈಸಿ ಮಾಡಿದ ಬಳಿಕ ಆಧಾರ್ ಗೆ ಪ್ಯಾನ್ ಲಿಂಕ್ ಮಾಡುವಂತೆ ತಿಳಿಸಿತ್ತು. ಈಗಾಗಲೇ ಬ್ಯಾಂಕ್ ಖಾತೆಗೆ ಪ್ಯಾನ್ ನಂಬರ್ ಲಿಂಕ್ ಮಾಡಲಾಗಿದೆ. ಹೀಗೆ ಹಂತ ಹಂತವಾಗಿ ಒಬ್ಬ ವ್ಯಕ್ತಿಯ ಹಣಕಾಸು ವ್ಯವಹಾರವನ್ನು ಸಂಪೂರ್ಣವಾಗಿ ತಿಳಿಯುವ ಕೆಲಸ ಮಾಡಲಾಯಿತು. ಆ ಕಾರಣದಿಂದ ಆದಾಯ ತೆರಿಗೆ ಪಾವತಿದಾರರ ಪಟ್ಟಿ ಸಂಗ್ರಹಿಸಲಾಗಿದೆ. ಆ ಪಟ್ಟಿಯಲ್ಲಿ ರೇಷನ್ ಕಾರ್ಡ್ ನಲ್ಲಿ ಯಾರೆಲ್ಲ ಹೆಸರಿದೆ ಎನ್ನುವವರ ಪಟ್ಟಿಯ ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರಕ್ಕೆ ನೀಡಿ ಇವರೆಲ್ಲ ನಕಲಿ ಪಡಿತರ ಚೀಟಿದಾರರು ಎಂದು ಹೇಳಿದ್ದ ಪರಿಣಾಮವೇ ರೇಷನ್ ಕಾರ್ಡ್ ರದ್ದಾಗಲು ಮೂಲ ಕಾರಣ ಎಂದೇ ಹೇಳಲಾಗುತ್ತಿದೆ. ಬ್ಯಾಂಕ್ ನಲ್ಲಿ ಕೃಷಿ, ಶಿಕ್ಷಣ, ವಾಹನ ಸಾಲಕ್ಕಾಗಿ ಐಟಿ ಫೈಲಿಂಗ್ ತೋರಿಸಿದವರಿಗೂ ರದ್ದತಿಯ ಶಾಕ್ ರೈತರು ತಮ್ಮ ಕೃಷಿ ಕೆಲಸಗಳಿಗಾಗಿ ಸಾಲಸೌಲಭ್ಯಕ್ಕಾಗಿ ಐಟಿ ಫೈಲಿಂಗ್ ನಂತಹ ಕೆಲಸ ಮಾಡಿದ್ದು ಇಂದು ರೇಷನ್ ಕಾರ್ಡ್ ರದ್ದತಿಗೆ ಪ್ರಮುಖ ಕಾರಣವಾಗಿದೆ.
ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲ, ವಾಹನ ಖರೀದಿಗೆ ಸಾಲ ಪಡೆಯಲು ಸುಲಭವಾಗಿ ಕಂಡುಕೊಂಡ ವಿಧಾನ, ಬ್ಯಾಂಕ್ ಮಂದಿ ಸಾಲ ಕೊಡೋದಕ್ಕೆ ಹೇಳಿದ್ದು ಐಟಿ ಫೈಲಿಂಗ್ ಮಾಡಿ. ನಿಮಗೆ ಸುಲಭವಾಗಿ ಸಾಲ ಸಿಗುತ್ತದೆ ಅನ್ನೋದು. ಈ ಮಾತನ್ನು ನಂಬಿದಂತ ಬಡ ರೈತ ಕುಟುಂಬದವರು 1, 2, 3ರಂತೆ ಲಕ್ಷಾಂತರ ವ್ಯವಹಾರ ನಡೆಸಿದ್ದಾಗಿ ಐಟಿ ಫೈಲಿಂಗ್ ಮಾಡಿದ್ದನ್ನು ಬ್ಯಾಂಕ್ ಗೆ ತೋರಿಸಿದ್ದಾರೆ. ಆ ಬಳಿಕ ಸಾಲ ಸೌಲಭ್ಯವನ್ನು ಪಡೆದಿದ್ದಾರೆ. ಇದೀಗ ಇಂತಹವರೆಲ್ಲರ ಮಾಹಿತಿಯನ್ನು ಪ್ಯಾನ್ ಸಂಖ್ಯೆ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆಯು ಪಟ್ಟಿ ಮಾಡಿ ಕೇಂದ್ರ ಸರ್ಕಾರಕ್ಕೆ ನೀಡಿತ್ತು. ಆ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿ, ನೋಡಿ ನೀವು ಎಷ್ಟು ಆದಾಯ ತೆರಿಗೆ ಪಾವತಿಯ ಕುಟುಂಬಸ್ಥರಿಗೆ ರೇಷನ್ ಕಾರ್ಡ್ ಕೊಟ್ಟಿದ್ದೀರಿ. ರದ್ದು ಮಾಡಿ ಎಂಬುದಾಗಿ ಸೂಚಿಸಿದೆ ಎನ್ನಲಾಗುತ್ತಿದೆ. ಹೀಗಾಗಿಯೇ ಇಂದು ರಾಜ್ಯಾಧ್ಯಂತ ಹಲವರ ಪಡಿತರ ಚೀಟಿಗಳು ರದ್ದುಗೊಂಡಿವೆ ಎಂಬುದಾಗಿ ಮೂಲಗಳ ಮಾಹಿತಿಯಾಗಿದೆ. ಒಬ್ಬರು ಆದಾಯ ತೆರಿಗೆ ಪಾವತಿಸಿದ್ದಕ್ಕೆ ಇಡೀ ಕುಟುಂಬದ ರೇಷನ್ ಕಾರ್ಡ್ ರದ್ದು ಮಹತ್ವದ ವಿಷಯವೆಂದ್ರೆ ರೇಷನ್ ಕಾರ್ಡ್ ರದ್ದುಗೊಂಡಿರುವಂತ ಇಡೀ ಕುಟುಂಬಸ್ಥರು ಆದಾಯ ತೆರಿಗೆ ಪಾವತಿದಾರರಲ್ಲ.
ಅವರಲ್ಲೊಬ್ಬರು ನಾನಾ ಕಾರಣಗಳಿಂದ, ಸಾಲಸೌಲಭ್ಯದ ಕಾರಣದಿಂದ ಐಟಿ ಫೈಲ್ ಮಾಡಿದ್ದರ ಪರಿಣಾಮ ಇಂದು ಇಡೀ ಕುಟುಂಬದ ರೇಷನ್ ಕಾರ್ಡ್ ರದ್ದಾಗಿದೆ. ಅವರೆಲ್ಲರೂ ಸ್ಥಿತಿವಂತರು, ಆದಾಯ ತೆರಿಗೆ ಪಾವತಿದಾರ ಕುಟುಂಬದವರು ಎಂಬುದಾಗಿ ಪರಿಗಣನೆಗೊಂಡು ಅವರ ಪಡಿತರ ಚೀಟಿಯನ್ನು ರದ್ದುಪಡಿಸಲಾಗಿದೆ. ನಕಲಿ ದಾಖಲೆ: ತಪ್ಪು ಮಾಹಿತಿ ನೀಡಿ ಕಾರ್ಡ್ ಪಡೆದವರು. ಮರಣ ಹೊಂದಿದವರು: ಕುಟುಂಬದ ಮುಖ್ಯಸ್ಥರು ಮರಣ ಹೊಂದಿದ್ದರೂ ಹೆಸರು ತೆಗೆಯದಿರುವುದು. ಆದಾಯ ತೆರಿಗೆ ಪಾವತಿಸುವವರು / ಸರ್ಕಾರಿ ನೌಕರರು: ಬಿಪಿಎಲ್ ಕಾರ್ಡ್ ಹೊಂದಿದ್ದರೆ ರದ್ದು. 100 ವರ್ಷ ಮೇಲ್ಪಟ್ಟವರು: ಮನೆಯಲ್ಲಿ ಇಲ್ಲದಿದ್ದರೂ, 100 ವರ್ಷ ದಾಟಿದವರ ಹೆಸರಿನಲ್ಲಿ ಅಕ್ಕಿ ಪಡೆಯುತ್ತಿದ್ದರೆ ಕಾರ್ಡ್ ಬ್ಲಾಕ್.
ನಮ್ಮ ಕಾರ್ಡ್ ಸ್ಥಿತಿಯನ್ನು ಹೇಗೆ ಪರಿಶೀಲಿಸಬಹುದು?
ವಿಧಾನ 1: ಮಾಹಿತಿ ಕಣಜ (Mahiti Kanaja) Mahiti Kanaja ವೆಬ್‌ಸೈಟ್ ಗೆ ಭೇಟಿ ನೀಡಿ. ಸರ್ಚ್ ಬಾಕ್ಸ್‌ನಲ್ಲಿ “Ration Card Status” ಟೈಪ್ ಮಾಡಿ. ನಿಮ್ಮ ಪಡಿತರ ಚೀಟಿ ನಂಬರ್ ಹಾಕಿ Submit ಒತ್ತಿ. ಕಾರ್ಡ್ ವಿವರ ಮತ್ತು ಸ್ಟೇಟಸ್ ತಕ್ಷಣ ಪ್ರದರ್ಶಿಸಲಾಗುತ್ತದೆ.
ವಿಧಾನ 2: ಆಹಾರ ಇಲಾಖೆ ವೆಬ್‌ಸೈಟ್ (Ahara Portal) Ahara Portal ಗೆ ಭೇಟಿ ನೀಡಿ. ಇ-ಸೇವೆಗಳು → ಇ-ಪಡಿತರ ಚೀಟಿ ಆಯ್ಕೆ ಮಾಡಿ. ಪಡಿತರ ಚೀಟಿ ವಿವರ ಕ್ಲಿಕ್ ಮಾಡಿ ನಿಮ್ಮ ಸ್ಟೇಟಸ್ ಪರಿಶೀಲಿಸಬಹುದು.
