Home » 14.21 ಲಕ್ಷ ರೈತರಿಗೆ 2249 ಕೋಟಿ ರೂ. ಬೆಳೆಹಾನಿ ಪರಿಹಾರ ಘೋಷಣೆ

14.21 ಲಕ್ಷ ರೈತರಿಗೆ 2249 ಕೋಟಿ ರೂ. ಬೆಳೆಹಾನಿ ಪರಿಹಾರ ಘೋಷಣೆ

ಬೆಳೆಹಾನಿ ಪರಿಹಾರ : ರೈತರೇ ಗಮನಿಸಿ ಈ ವರ್ಷ ರೈತರು ಒಂದಲ್ಲಾ ಒಂದು ತೊಂದರೆಗಳಿಗೆ ಸಿಲುಕುತ್ತೀದ್ದಾರೆ. ಅದಕ್ಕೆ ಸರ್ಕಾರವು ಕೂಡ ರೈತರ ಪರವಾಗಿ ನಿಂತು ಸ್ವಲ್ಪ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ 14.21 ಲಕ್ಷ ರೈತರಿಗೆ 2,249 ಕೋಟಿ ರೂ. ಬೆಳೆ ಪರಿಹಾರ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು. ಬೆಳಗಾವಿಯ ಸುವರ್ಣ ವಿಧಾನಸೌಧದ ಅಧಿವೇಶನದಲ್ಲಿ ಮಂಗಳವಾರ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ ಸದನಕ್ಕೆ ಈ ಮಾಹಿತಿ ನೀಡಿದರು.

ಪರಿಹಾರ ಹಣ ಬರಲು ಏನು ಮಾಡಬೇಕು?

  • ಪ್ರತಿಯೊಬ್ಬ ರೈತರು ತಮ್ಮ ಹತ್ತಿರದ ಪಂಚಾಯಿತಿ ಹೋಗಿ ಭೇಟಿ ಮಾಡಬೇಕು.
  • ನಿಮ್ಮ ಹತ್ತಿರದ ಕಂದಾಯ ಇಲಾಖೆ ಭೇಟಿ ನೀಡಿ ತಲಾಟಿ ಹತ್ತಿರ ನಿಮ್ಮ ಜಮೀನಿನ ಸರ್ವೇ ಬಗ್ಗೆ ತಿಳಿಯಬೇಕು.
  • ರೈತರು ಕಡ್ಡಾಯವಾಗಿ ಎಫ್ ಐಡಿ ಹೊಂದಬೇಕು.
  • ರೈತರು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಲಿಂಕ್ ಕಡ್ಡಾಯವಾಗಿ ಹೊಂದಿರಬೇಕು.

ಮುಂಗಾರು ಮಳೆಯಿಂದ ಬೆಳೆ ನಷ್ಟಕ್ಕೆ ತುತ್ತಾದ ರೈತರಿಗೆ ರಾಜ್ಯ ಸರ್ಕಾರ ಕೊನೆಗೂ ಸಿಹಿ ಸುದ್ದಿ ನೀಡಿದೆ. ಮಳೆಹಾನಿಯಿಂದ ಸಂಕಷ್ಟ ಅನುಭವಿಸಿದ ಅನ್ನದಾತರ ನೆರವಿಗೆ ಸರ್ಕಾರವು ₹1,033 ಕೋಟಿ ರೂ.ಗಳ ಪರಿಹಾರವನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ವರ್ಗಾವಣೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ಮುಖ್ಯಮಂತ್ರಿಗಳು ಈಗಾಗಲೇ ಕಂದಾಯ ಸಚಿವರೊಂದಿಗೆ ದೆಹಲಿಗೆ ತೆರಳಿ, ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ. ಈ ವರ್ಷ ರೈತರಿಗೆ ಪರಿಹಾರ ನೀಡಲು ಹಾಗೂ ಅತಿವೃಷ್ಟಿಯಿಂದ ಉಂಟಾದ ಆಸ್ತಿ ಪಾಸ್ತಿಗಳಿಗೆ ಪರಿಹಾರ ಮೊತ್ತ ಸೇರಿದಂತೆ ಕೇಂದ್ರ ಸರ್ಕಾರ ಇದುವರೆಗೂ ಯಾವುದೇ ಅನುದಾನ ಬಿಡುಗೆ ಮಾಡಿಲ್ಲ. ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿ ಅನುಭವಿಸಿದ ರೈತರಿಗೆ ವಿಪತ್ತು ಪರಿಹಾರದಲ್ಲಿನ ಮಾರ್ಗಸೂಚಿಗಿಂತಲೂ ಹೆಚ್ಚುವರಿಯಾಗಿ ಪರಿಹಾರ ಮೊತ್ತವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ ಎಂದರು.

ಯಾರಿಗೆ ಎಷ್ಟು ಪರಿಹಾರ?

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಂತೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು, ರಾಜ್ಯದಲ್ಲಿ 86.81 ಲಕ್ಷ ರೈತ ಕುಟುಂಬಗಳಿದ್ದು, 118.5 ಲಕ್ಷ ಹೆಕ್ಟೇರ್ ಮಳೆ ಆಶ್ರಿತ ಪ್ರದೇಶವಿದೆ. ಆದರೆ ರಾಜ್ಯದಲ್ಲಿ ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬುದಾಗಿ ಆರೋಪಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, 2023 ರಲ್ಲಿ ಬರ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರಿದಾಗ, ಕೇಂದ್ರ ಸರ್ಕಾರ ನೆರವಿಗೆ ಬರಲಿಲ್ಲ. ನಮ್ಮ ಸರ್ಕಾರ ಸುಪ್ರಿಂಕೋರ್ಟ್ ಮೊರೆಹೋಗಿ ಪರಿಹಾರ ಕೇಳುವ ಪ್ರಸಂಗ ಬರುವಂತಾಯಿತು. 38 ಲಕ್ಷ ರೈತರಿಗೆ ಸುಮಾರು 4300 ಕೋಟಿ ರೂ. ಪರಿಹಾರವನ್ನು ನಾವು ಕೊಟ್ಟಿದ್ದೇವೆ. ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ 14.21 ಲಕ್ಷ ರೈತರಿಗೆ ಈಗಾಗಲೇ 2,249 ಕೋಟಿ ರೂ. ಪರಿಹಾರವನ್ನು ನೀಡಿದ್ದೇವೆ. ಸರ್ಕಾರದ ವೈಫಲ್ಯ ಇದ್ದರೆ ಟೀಕೆ ಮಾಡಲಿ, ಆದರೆ ಮಾಡಿದ ಕೆಲಸವನ್ನು ಮಾಡಿಯೇ ಇಲ್ಲ ಎಂದರೆ, ಅದನ್ನು ಕೇಳಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಹೇಳಿದರು.

ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ –

FRUITS ಸಾಫ್ಟ್‌ವೇರ್‌ನಲ್ಲಿ ದಾಖಲಾಗಿರುವ ರೈತರ ಭೂಮಿಯ ವಿಸ್ತೀರ್ಣದ ಆಧಾರದ ಮೇಲೆ, ಪ್ರತಿ ರೈತನಿಂದ 50 ಕ್ವಿಂಟಾಲ್‌ಗಳವರೆಗೆ ಮೆಕ್ಕೆಜೋಳವನ್ನು ಖರೀದಿಸಬಹುದು. ಪ್ರತಿ ಕ್ವಿಂಟಾಲ್‌ಗೆ 2,400 ರೂ.ಗಳ ಬೆಂಬಲ ಬೆಲೆ ನೀಡಲಾಗುತ್ತದೆ. ಇದನ್ನು ಎಕರೆಗೆ 12 ಕ್ವಿಂಟಾಲ್‌ಗಳಂತೆ ಲೆಕ್ಕಹಾಕಲಾಗುತ್ತದೆ. ಡಿಸ್ಟಿಲರಿಗಳ ಬಳಿ ಇರುವ ಪ್ರಾಥಮಿಕ ಕೃಷಿ ಸಾಲ ಸಂಘಗಳ (ಪಿಎಸಿಎಸ್) ಮೂಲಕ ಖರೀದಿಗೆ ಆದ್ಯತೆ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಬೆಂಬಲ ಬೆಲೆಯಡಿ ಸರ್ಕಾರವೇ ಖರೀದಿ ಕೇಂದ್ರಗಳ ಮೂಲಕ ರೈತರು ಬೆಳೆದ ಮೆಕ್ಕೆಜೋಳ ಖರೀದಿ ಮಾಡುವಂತೆ ಆಗ್ರಹಿಸಿ ಧಾರವಾಡ, ನವಲಗುಂದ, ಕುಂದಗೋಳ ಸೇರಿದಂತೆ ಇತರ ಭಾಗದ ರೈತರು ಹೋರಾಟ ನಡೆಸಿದ್ದರು.

Leave a Reply

Your email address will not be published. Required fields are marked *